ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ದುಷ್ಕರ್ಮಿಗಳಿಂದ ಒಂದು ಎಕರೆ ಕಲ್ಲಂಗಡಿ ಬೆಳೆ ಹಾಳಾಗಿರುವುದು ಜಿಲ್ಲೆಯ ಕುಷ್ಟಗಿ ತಾಲೂಕಿನ ನಾಗರಾಳ ಜಮೀನೊಂದರಲ್ಲಿ ಬೆಳಕಿಗೆ ಬಂದಿದೆ..!
ಯಮನಪ್ಪ ತಂದೆ ಮರಿಯಪ್ಪ ತಳವಾರ ಇವರಿಗೆ ಸೇರಿದ 1 ಎಕರೆ ಜಮೀನನ್ನು ಅದೇ ಗ್ರಾಮದ ಶರಣಪ್ಪ ತಂದೆ ಚಂದ್ರಪ್ಪ ವಂಕಲಕುಂಟಾ ಎಂಬುವರು ಗುತ್ತಿಗೆ ಪಡೆದು, ಕಲ್ಲಂಗಡಿ ಸೀಡ್ಸ್ ಪ್ಲಾಟ್ ಬೆಳೆದಿದ್ದರು. ಆದರೆ, ಯಾರೋ ದುಷ್ಕರ್ಮಿಗಳು ಕಾಯಿ ಸೇರಿದಂತೆ ಬಳ್ಳಿಯನ್ನು ಚೆಂಡಿಯಾಡಿದ್ದಾರೆ. ಈಗಾಗಲೇ ಕೈಗೆ ಬಂದಿದ 2 ತಿಂಗಳಿನ ಫಸಲಿಗೆ ಕ್ರಾಸ್ ಮಾಡುವುದಕ್ಕೆ ಸೇರಿದಂತೆ ಜಮೀನು ಹದ, ಬೀಜ, ಕ್ರಾಸ್ ಪರಿಕರಗಳು ಇತ್ಯಾದಿಗಳಿಗೆ ಲಕ್ಷಾಂತರ ರೂಪಾಯಿಗಳ ಕರ್ಚು ಮಾಡಿಕೊಂಡು ಕೈ ಸುಟ್ಟುಕೊಂಡಿದ್ದ ರೈತ ದುಷ್ಕರ್ಮಿಗಳ ಮೋಸದಾಟಕ್ಕೆ ಕಂಗಾಲಾಗಿದ್ದಾನೆ. ಲಕ್ಷಾಂತರ ರೂಪಾಯಿಗಳಷ್ಟು ಹಾನಿಯಾಗಿದೆ ಎಂದು ರೈತ ಶರಣಪ್ಪ ತಂದೆ ಚಂದ್ರಪ್ಪ ವಂಕಲಕುಂಟ “ಕೃಷಿ ಪ್ರಿಯ” ಪತ್ರಿಕೆ ಮುಂದೆ ಅಳಲು ತೊಡಿಕೊಂಡಿದ್ದಾನೆ. ಕಲ್ಲಂಗಡಿ ಬೆಳೆ ಹಾಳು ಮಾಡಿದವರನ್ನು ಪತ್ತೆ ಹಚ್ಚುವ ಮೂಲಕ ಕಾನೂನು ಕ್ರಮ ಜರುಗಿಸುವಂತೆ ರೈತ ಶರಣಪ್ಪ ಕುಷ್ಟಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ..!!