ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬೆಂಗಳೂರು (ಕೊಪ್ಪಳ) : ಬಿಪಿಎಲ್ ಹಾಗೂ ಅನ್ನ ಅಂತ್ಯೋದಯ ಕಾರ್ಡ (ಎಎವೈ) ಹೊಂದಿದ ಸರಕಾರಿ ಮತ್ತು ಅರೆ ಸರಕಾರಿ ನೌಕರರಿಗೆ ಕಾರಣ ಕೇಳಿ ನೋಟಿಸ್ ನೀಡಿರುವುದಲ್ಲದೆ, 40,000=00 ರೂಪಾಯಿಗಳಿಂದ 1,50,000=00 ರೂಪಾಯಿಗಳವರೆಗೆ ದಂಡ ವಸೂಲಿಗೆ ಸರಕಾರ ಮುಂದಾಗಿರುವುದು ಬೆಳಕಿಗೆ ಬಂದಿದೆ..!?
ರಾಜ್ಯದಲ್ಲಿನ ಬಡವರು ಮತ್ತು ಕಡುಬಡವರ ಹಸಿವು ನಿಗಿಸುವುದಕ್ಕೆ ಜಾರಿಗೆ ಬಂದಿದ್ದ ರಾಜ್ಯ ಹಾಗೂ ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಅನ್ನ ಭಾಗ್ಯ ಯೋಜನೆಯನ್ನು ದುರುಪಯೋಗಪಡಿಸಿಕೊಂಡಿರುವ ಸರಕಾರಿ ಮತ್ತು ಅರೆ ಸರಕಾರಿ ನೌಕರರ ಪತ್ತೆಗೆ (ಹೆಚ್.ಆರ್.ಎಂ.ಎಸ್) ಮಾನವ ಸಂಪನ್ಮೂಲ ನಿರ್ವಹಣಾ ಮಾನ್ಯತೆ ಮತ್ತು ಕೆ.ಜಿ.ಆಯ್.ಡಿ ನಲ್ಲಿ ನಮೂದಿಸಿರುವ ಆಧಾರ ನಂಬರ್ ಮೂಲಕ ಮುಂದಾಗಿದೆ. ಈಗಾಗಲೇ 21232 ಸರಕಾರಿ ಮತ್ತು ಅರೆ ಸರಕಾರಿ ನೌಕರರು ಸೇರಿದಂತೆ ಅವರ ಅವಲಂಬಿತರ ಕುಟುಂಬಗಳನ್ನು ಪತ್ತೆ ಹಚ್ಚಿ ಆಹಾರ ಇಲಾಖೆ ತಾಲೂಕಾ ಮಟ್ಟದ ಅಧಿಕಾರಿಗಳ ಮೂಲಕ ‘ಅಗತ್ಯ ವಸ್ತುಗಳ ಕಾಯ್ದೆ’ ಅನ್ವಯ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ನೋಟಿಸ್ ಗೆ ನೌಕರರು ಕೂಡಲೇ ಉತ್ತರ ನೀಡಬೇಕು ಇಲ್ಲವಾದಲ್ಲಿ ಇಲ್ಲಿಯವರೆಗೂ ಆಗಿರುವ ನಷ್ಟ ವಸೂಲಿಗೆ ಮುಂದಾಗುವುದು ಸೇರಿದಂತೆ ಶಿಸ್ತುಕ್ರಮಕ್ಕೆ ಸಂಬಂಧಿಸಿದ ನೌಕರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಿಸುವ ಉದ್ದೇಶ ಸರಕಾರದ್ದಾಗಿದೆ..!?