ಡಿ ಬಾಸ್ ಅಭಿಮಾನಿಗಳಿಂದ ಪುಸ್ತಕ ವಿತರಣೆ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕನ್ನಡ ಚಲನ ಚಿತ್ರರಂಗದ ಖ್ಯಾತ ನಟ ದರ್ಶನ ಅವರ ಹುಟ್ಟು ಹಬ್ಬದ ನಿಮಿತ್ಯ ‘ಡಿ ಬಾಸ್’ ಅಭಿಮಾನಿ ಬಳಗವು ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ ಪುಸ್ತಕಗಳನ್ನು ವಿತರಿಸುವ ಮೂಲಕ ತಮ್ಮ ನೆಚ್ಚಿನ ಹುಟ್ಟು ಹಬ್ಬ ಆಚರಿಸಿದರು..!

‘ಡಿ ಬಾಸ್’ ಅಭಿಮಾನಿ ಬಳಗ ಸದಸ್ಯರಾದ ಮಲ್ಲು ಶಾಡಲಗೇರಿ, ಶಿವಕುಮಾರ ಪಟ್ಟಣಶೆಟ್ಟರ, ಮಹಾಂತೇಶ ನಂದಾಪುರ, ಧರ್ಮಣ್ಣ ಭಜಂತ್ರಿ, ಶರಣಪ್ಪ ನಂದಾಪುರ, ಮುತ್ತಪ್ಪ ನಿಡಗುಂದಿ, ಶರಣಪ್ಪ ತಳವಾರ, ಕುಮಾರ ಗುಡದೂರು, ಕಿರಣ್ ಬ್ಯಾಳಿ, ಕಳಕಪ್ಪ ಮ್ಯಾಗೇರಿ, ರಮೇಶ ಕುಮಾರ್, ಕಳಕುಸಾ ಹುಬ್ಬಳ್ಳಿ, ಕುಮಾರ ಸಜ್ಜನ್, ಬಸು ಕುಂಬಾರ, ಮುತ್ತಪ್ಪ ಬಜಂತ್ರಿ, ಮಂಜು ಜಾವೂರ, ಶರಣಪ್ಪ ಹಾಳಕೇರಿ, ರೇವಣ ಕುಮಾರ ಕುಂಬಾರ, ಪುಟ್ಟರಾಜ್ ಕಮ್ಮಾರ, ಸುನಿಲ್ ಕಮ್ಮಾರ, ದೇವರಾಜ್ ದಾಸರ, ಸಂಗಪ್ಪ ಹುಲ್ಲೂರ, ಮಂಜು ಹಂಡಿ, ಸಂತು ಕುಂಬಾರ, ಶರಣು ಡೊಳ್ಳಿನ, ಚಂದ್ರು ಆಂಧ್ರ ಸೇರಿದಂತೆ ಇನ್ನಿತರ ಅಭಿಮಾನಿಗಳು ಶಾಲೆಯ ಮುಖ್ಯಗುರುಗಳು ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.