ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಆಕಸ್ಮಿಕ ಬೆಂಕಿಗೆ ಮೂರು ಎಕರೆ ಬಾಳೆ ಬೆಳೆ ಸಂಪೂರ್ಣ ಸುಟ್ಟು ಬಸ್ಮವಾದ ಘಟನೆ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ತೋಟವೊಂದರಲ್ಲಿ ಜರುಗಿದೆ..!
ಹಿರೇಸಿಂದೋಗಿ ಗ್ರಾಮದ ಚನ್ನಯ್ಯ ಪೊಲೀಸ್ ಪಾಟೀಲ ಅವರಿಗೆ ಸೇರಿದ ಬಾಳೆ ತೋಟ ಕಟಾವು ಹಂತ ತಲುಪಿತ್ತು. ಆದರೆ, ಆಕಸ್ಮಿಕ ಬೆಂಕಿಯಿಂದ ಎಲ್ಲಾ ಫಸಲು ಸುಟ್ಟು ಹೋಗಿರುವುದು ರೈತನ ಮೇಲೆ ಬರೆ ಎಳೆದಂತಾಗಿದೆ. ಲಕ್ಷಾಂತರ ರೂಪಾಯಿಗಳ ಬೆಲೆ ಬಾಳುವ ಬಾಳೆಯಿಂದ ಹಸನಾಗಬೇಕಾಗಿದ್ದ ಅನ್ನದಾತನ ಬದುಕು ಮೂರಾಬಟ್ಟೆಯಾಗಿದೆ. ಚಿಂತಾಜನಕ ಪರಿಸ್ಥಿತಿಯಲ್ಲಿರುವ ರೈತನ ಪಾಲಿಗೆ ಜಿಲ್ಲಾಡಳಿತವು ನೆರವಿಗೆ ಮುಂದಾಗಬೇಕಾಗಿರುವುದು ಬಾಕಿ ಇದೆ.
ಭೇಟಿ : ಸುಟ್ಟು ಕರಕಲಾಗಿರುವ ಅತ್ಯಂತ ಸೂಕ್ಷ್ಮ ಬಾಳೆ ಬೆಳೆಯನ್ನು ನೋಡಿದವರ ಜೀವ ಚುರುಕು ಅನ್ನುವಂತಿದೆ. ಸಂಸದ ಸಂಗಣ್ಣ ಕರಡಿ ಸೇರಿದಂತೆ ಮುಖಂಡರಾದ ಈಶಪ್ಪ ಮಾದಿನೂರು, ಗಣೇಶ ಹೊರತಟ್ನಾಳ, ಬಸವರಾಜ ಹಾಗೂ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ, ರೈತನಿಗೆ ಧೈರ್ಯ ತುಂಬಿದರು..!!