ಕೃಷಿ ಪ್ರಿಯ ನ್ಯೂಸ್ |
ಸಂಗಮೇಶ ಮುಶಿಗೇರಿ
ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿ 1ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೆಕೆಆರ್ ಡಿಬಿ 2020-21 ನೇ ಸಾಲಿನ ಅನುದಾನದಡಿ 10.60 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕೊಠಡಿಯನ್ನು ಉದ್ಘಾಟಿಸಲಾಗಿತು..!
ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹಾಗೂ ಪುರಸಭೆ ಅಧ್ಯಕ್ಷ ಗಂಗಾಧರ ಕೆ.ಹಿರೇಮಠ ಅವರು ನೂತನ ಕೊಠಡಿಯನ್ನು ಉದ್ಘಾಟಿಸಿದರು. ಶಾಲಾ ಆವರಣದ ತಡೆಗೋಡೆ, ನಿರ್ಮಾಣ ಹಂತದಲ್ಲಿರುವ ಶೌಚಾಲಯ ಕೊಠಡಿ ಹಾಗೂ ಶಾಲಾ ಮೈದಾನ ಪರಿಶೀಲಿಸಿದರು. ನಂತರ ಶಾಲೆಯ ಮಕ್ಕಳ ದಾಖಲಾತಿ ಕುರಿತು ಮಾಹಿತಿ ಪಡೆದುಕೊಂಡು ಮಕ್ಕಳ ಸಂಖ್ಯೆಗೆ ಅನುಸಾರ ಇನ್ನೊಂದು ಕೊಠಡಿ ನಿರ್ಮಾಣದ ಕುರಿತು ಭರವಸೆ ನೀಡಿದರು. ಸ್ಥಳದಲ್ಲಿದ್ದ ನಿರ್ಮಿತಿ ಕೇಂದ್ರದ ಇಂಜಿನಿಯರ್ ಆದೇಶ ಅವರಿಗೆ ಈಗಿರುವ ಹಳೆಯ ಬಿಸಿಯೂಟದ ಕೊಠಡಿ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಹಾಗೂ ಶೌಚಾಲಯ ಕಟ್ಟಡವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದರು. ಬಳಿಕ ಕಾಲೋನಿಯ ನಿವಾಸಿಗಳು ವಾರ್ಡಿಗೆ ಬೇಕಾಗುವ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಾಸಕ ಮತ್ತು ಪುರಸಭೆ ಅಧ್ಯಕ್ಷಗೆ ಮನವಿ ಪತ್ರ ಸಲ್ಲಿಸಿದರು. ಪುರಸಭೆ ಸದಸ್ಯೆ ಗೀತಾ ಮಹೇಶ ಕೊಳೂರು, ಬಿಇಓ ಚೆನ್ನಬಸಪ್ಪ ಮಗ್ಗದ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಶೈಲ ಸೋಮನಕಟ್ಟಿ, ಎಸ್ ಡಿಎಂಸಿ ಅಧ್ಯಕ್ಷ ರವಿಕುಮಾರ ಸೇಬಿನಕಟ್ಟಿ, ಮಹೇಶ ಕೊಳೂರು, ಕಸಾಪ ನೂತನ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಮುಖ್ಯಶಿಕ್ಷಕಿ ಜಯಶ್ರೀ ಉಪ್ಪಿನ ಹಾಗೂ ಶಾಲಾ ಶಿಕ್ಷಕಿಯರು ಮತ್ತು ಮಕ್ಕಳು ಹಾಜರಿದ್ದರು..!!