68 ಎಕರೆ ಜಮೀನಿಗೆ ಪರಬಾರೆ ದಾಖಲೆಗಳಿಲ್ಲ..?

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀರ ಗುಡದೂರು ಗ್ರಾಮಸ್ಥರ ಹಾಗೂ ಪಟ್ಟೆದಾರನ ನಡುವಿನ ವಿವಾದಿತ 68-07 ಎಕರೆ ಜಮೀನು ಪಟ್ಟೆದಾರನ ಹೆಸರಿಗೆ ಹೇಗೆ ಪರಬಾರೆ ಆಗಿತು ಎಂಬುದು ಇಲ್ಲಿನವರಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ..!?

ಹನುಮನಾಳ ಕಂದಾಯ ಹೋಬಳಿಯ ಜಾಗೀರ ಗುಡದೂರು ಗ್ರಾಮದ ಸರ್ವೇ ನಂಬರ್ 58/1/* ರ 13-26 ಎಕರೆ, ಸ.ನಂ 58/2/* ರ 26-30 ಎಕರೆ ಹಾಗೂ 58/3/* ರ 27-31 ಎಕರೆ ಸೇರಿದಂತೆ ಒಟ್ಟು 68-07 ಎಕರೆ ಜಮೀನು ಗೋವಿಂದಾಚಾರ್ಯ ಕೊಳ್ಳಿ ಎಂಬುವರ ಹೆಸರಿಗೆ ಈ ಹಿಂದೆ ದಾಖಲಾಗಿದೆ. ಆದರೆ, ಜಮೀನನ್ನು ಪಟ್ಟೆದಾರರು ದಕ್ ಖರೀದಿ ಮಾಡಿದ್ದಾರೆಯೇ.. ಇಲ್ಲವೇ, ದಾನ ಪತ್ರದ ಮೂಲಕ ವರ್ಗಾವಣೆಯಾಗಿದೆಯೇ… ಅಥವಾ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ (Tenancy Act -1974) ಮೂಲಕ ಜಮೀನಿಗೆ ಗೇಣಿದಾರರಾದರೇ ಎಂಬ ಇತ್ಯಾದಿ ಪ್ರಶ್ನೆಗಳು ಗ್ರಾಮಸ್ಥರನ್ನು ಕಾಡುತ್ತಿವೆ. ಗ್ರಾಮಸ್ಥರಿಗೆ ಕಾಡುವ ಪ್ರಶ್ನೆಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ..!!

(ದಾಖಲೆಗಳ ಸಮೇತ ಕುತೂಹಲಕಾರಿ ವಿಶೇಷ ವರದಿಗಳನ್ನು ಇನ್ನೂ ನಿರೀಕ್ಷಿಸಿ..!)