ಜಮೀನು ಮೊಟೇಶನ್ ಗೆ ಗ್ರಾಮಸ್ಥರಿಂದ ವಿರೋಧ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀರ ಗುಡದೂರು ಗ್ರಾಮದ ವಿವಾದಿತ ಒಟ್ಟು 68-07 ಎಕರೆ ಜಮೀನು ಪೈಕಿ ಇತ್ತೀಚೆಗೆ ದಕ್ ಖರೀದಿ ಆಗಿರುವ (13.26 ಹಾಗೂ 26.30 ಎಕರೆ) ಒಟ್ಟು 40-16 ಎಕರೆ ಜಮೀನಿನ ಮೊಟೇಶನ್ ಗೆ ಜಾಗೀರ ಗುಡದೂರು ಗ್ರಾಮಸ್ಥರು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ..!!

ಜಾಗೀರ ಗುಡದೂರು ಗ್ರಾಮ ಸೇರಿದಂತೆ ಕೋನಾಪೂರು, ಪರಮನಹಟ್ಟಿ ಹಾಗೂ ಗುಡ್ಡದ ದೇವಲಾಪೂರು ಗ್ರಾಮಸ್ಥರು ಗೈರಾಣ ಜಮೀನು ಖರೀದಿಗೆ ವಿರೋಧಿಸುವುದು ಅಲ್ಲದೆ, ಹಕ್ಕು ಬದಲಾವಣೆಗೆ ನಮ್ಮ ಬಲವಾದ ತಕರಾರು ಇರುವುದನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ದಾಖಲೆಗಳ ಮೂಲಕ ಮನವರಿಕೆಮಾಡಿಕೊಟ್ಟಿದ್ದಾರೆ. ತಕರಾರು ಜೊತೆಗೆ ನ್ಯಾಯಾಲಯದ ಮೊರೆ ಹೋಗುವವರಿಗೂ ತಡೆಯಾಜ್ಞೆ ಆದೇಶ ಕೂಡಾ ಸಲ್ಲಿಸಿದ್ದಾರೆ. ಜಮೀನು ಖರೀದಿ ಪತ್ರ ಅಸಿಂಧುಗೊಳಿಸಲು ಕಾನೂನು ಹೋರಾಟದ ಚಿಂತನೆಯಲ್ಲಿದ್ದಾರೆ. ಇಡೀ ಗ್ರಾಮಸ್ಥರ ವಿರೋಧದ ಮಧ್ಯೆ ಹಕ್ಕಬದಲಾವಣೆ ಹೇಗೆ ಸಾಧ್ಯ ಎಂಬ ಮಾತುಗಳು ಕೂಡಾ ಗ್ರಾಮಸ್ಥರಿಂದ ಕೇಳಿಬಂದಿವೆ..!!