ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಶಿವಮೊಗ್ಗದಲ್ಲಿ ನಡೆದ ಕ್ಷತ್ರಿಯ ಸಮಾಜದ ಯುವಕ ‘ಹರ್ಷ’ನ ಬರ್ಬರ ಹತ್ಯೆಗೆ ಕುಮ್ಮಕ್ಕು ನೀಡಿದ SDPI ಹಾಗೂ PFI ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿ ಕ್ಷತ್ರಿಯ ಸಮಾಜದ ಭಾವಸಾರ ಬಂಧುಗಳು 23-02-2022 ರಂದು ಜಿಲ್ಲೆಯ ಕುಷ್ಟಗಿ ತಹಸೀಲ್ದಾರ್ ಎಂ.ಸಿದ್ದೇಶ ಅವರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು..!
ಹರ್ಷ ಜಿಂಗಾಡೆ ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆ ಮರು ಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಎ.ವಾಯ್.ಲೋಕರೆ, ರಮೇಶ ಕಾಪ್ಸೆ, ಚಂದ್ರಕಾಂತ ಜ್ಞಾನಮೋಟೆ, ಅಮೃತರಾಜ ಜ್ಞಾನಮೋಟೆ, ರವೀಂದ್ರ ಬಾಕಳೆ, ಶ್ರೀಧರ ಗೋರ್ಪಡೆ, ನವೀನ್ ಜ್ಞಾನಮೋಟೆ, ರಾಮು ಜ್ಞಾನಮೋಟೆ, ಮಹಾಂತೇಶ ಆರೇರ, ಆರ್.ಕೆ.ಕರ್ಗೆ ಸೇರಿದಂತೆ ಕ್ಷತ್ರಿಯ ಸಮಾಜದವರು ಉಪಸ್ಥಿತರಿದ್ದರು..!!