ಗಜ್ಜರಿಗೆ ಗೊರಲಿ ಬಾಧೆ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಗದಗ) : ರಾಜ್ಯದ ಬಹುತೇಕ ಗಜ್ಜರಿ ಬೆಳೆಗಾರರು ಗೊರಲಿ ಬಾಧೆಯಿಂದ ತತ್ತರಿಸಿ ಹೋಗಿದ್ದಾರೆ. ಅದರ ಅಷ್ಟೇ ಈ ವರ್ಷ ಇಳುವರಿ ಪ್ರಮಾಣದಲ್ಲಿ ಸಾಕಷ್ಟು ಇಳಿಕೆ ಕಂಡಿದೆ..!

 ಕಪ್ಪು ಜಮೀನಿನಲ್ಲಿ ಅದರಲ್ಲಿ ಉಪ್ಪು ನೀರಿಗೆ ಹೇರಳವಾಗಿ ಬೆಳೆಯುವ ಗಜ್ಜರಿ ಗಡ್ಡೆಗೆ ಈ ವರ್ಷ ಗೊರಲಿ ಕಾಟ ಹೆಚ್ಚಾಗಿ ಕಂಡು ಬಂದಿದೆ. ರೋಗ ಬಾಧೆಯಿಂದ ಕೂಡಿದ ಗಜ್ಜರಿಯನ್ನು ಮಾರುಕಟ್ಟೆಯಲ್ಲಿ ಯಾರು ಕೇಳದಂತಾಗಿದೆ. ಕಾಯಿಪಲ್ಯಗಳಲ್ಲಿಯೇ ಬಹು ಬೇಡಿಕೆಯ ಗಜ್ಜರಿಯನ್ನು ಈ ವರ್ಷ ಗೊರಲಿ ತಿಂದು ಹಾಕಿದೆ. ವಿಪರಿತ ಗೊರಲಿ ಹುಳಗಳ ಹಾವಳಿಯಿಂದ ಗಡ್ಡೆಯ ಸೌಂದರ್ಯ ಸಂಪೂರ್ಣ ಹಾಳಾಗಿ ಹೋಗಿದೆ. ಸಾಕಷ್ಟು ಆದಾಯ ನಿರೀಕ್ಷೆಯಲ್ಲಿದ್ದ ರಾಜ್ಯದ ಗಜ್ಜರಿ ಬೆಳೆಗಾರರು ಗೊರಲಿ ಹುಳುಗಳ ಹಾವಳಿಗೆ ಬಲಿಯಾಗಿದ್ದಾರೆ ಎಂದರೇ ತಪ್ಪಾಗಲಾರದು. ಗದಗ ಜಿಲ್ಲೆಯ ರೋಣ, ಗದಗ ಹಾಗೂ ಈ ಭಾಗದ ಗಜ್ಜರಿ ಬೆಳೆಗಾರರು ಸೂಕ್ತ ಪರಿಹಾರಕ್ಕಾಗಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ..!!