ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹನುಮಂತನ ಜನ್ಮ ಸ್ಥಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದಾ ಪ್ರದೇಶ ಎಂದು ಸರಕಾರ ಅಧಿಕೃತವಾಗಿ ಸಾಭಿತುಪಡಿಸುವ ಕಾರ್ಯವನ್ನು ಕೋಟ್ಯಾಂತರ ಜನ ಕನ್ನಡಿಗ ಆಂಜನೇಯ ಭಕ್ತರು ಎದುರು ನೋಡುತ್ತಿದ್ದಾರೆ..!
ತಿರುಪತಿ ತಿರುಮಲ ಪ್ರದೇಶವೇ ಹನುಮನ ಜನ್ಮ ಸ್ಥಳವೆಂದು ಅಲ್ಲಿನ ಟ್ರಸ್ಟ್ ಘೋಷಿಸಿಕೊಂಡು ಈಗಾಗಲೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಆದರೆ, ಕಿಷ್ಕಿಂದಾ ಪ್ರದೇಶವು ರಾಮಾಯಣದಲ್ಲಿರುವ ಬಹುತೇಕ ಪ್ರಸಂಗಗಳ ಸ್ಥಳಗಳು ಸಾಕ್ಷಿಗಿವೆ. ಆದರೆ, ಟಿಟಿಡಿಯೂ ಹನುಮನ ಸ್ಥಳ ತಮ್ಮದು ಎಂದು ಮಂಡವಾದದ ಮೂಲಕ ವಿವಾದ ಸೃಷ್ಟಿಸಿಕೊಂಡಿದೆ. ವಿವಾದಕ್ಕೆ ತೆರೆ ಎಳೆಯಲು ರಾಜ್ಯ ಸರಕಾರ ಮತ್ತು ಖುದ್ದು ಮುಖ್ಯಮಂತ್ರಿಗಳೇ ಕಾಳಜಿ ತೊರಬೇಕಾಗಿದೆ. ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಕೇವಲ ಹೇಳಿಕೆಗಳಿಗೆ ಮುಂದಾಗಿ ಕೇಸರಿ ನಂದನನ ಜನ್ಮ ಸ್ಥಳವಾದ ಕಿಷ್ಕಿಂದಾ ಪ್ರದೇಶದ ಅಭಿವೃದ್ಧಿಯನ್ನು ಮರೆಮಾಚಿಸುವಂತಾಗಿದೆ ಎಂಬುದು ಅಂಜನಿ ಪುತ್ರನ ಅಭಿಮಾನಿಗಳ ಆರೋಪವಾಗಿದೆ..!!