ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಪಟ್ಟಣದ ರಾಯಚೂರು ರಸ್ತೆಯ ಕಂದಕೂರ ಕ್ರಾಸ್ ಬಳಿ ಶರಣ ನಿಜಸುಖಿ ಹಡಪದ ಅಪ್ಪಣ್ಣ ವೃತ್ತ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.
ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ವೃತ್ತದ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿ, 12 ನೇ ಶತಮಾನದ ಬಸವೇಶ್ವರರು ಹಾಕಿಕೊಟ್ಟ ಮಾರ್ಗದಲ್ಲೇ ಸಮಾಜದ ಅಂಕುಡೊಂಕು ತಿದ್ದಿದ ಮಹಾನ್ ಶರಣರಲ್ಲೊಬ್ಬರಾದ ಬಸವಪ್ರಿಯ ನಿಜಸುಖಿ ಹಡಪದ ಅಪ್ಪಣನವರ ನಿತ್ಯ ಸ್ಮರಣೆಗೋಸ್ಕರ ಪಟ್ಟಣದಲ್ಲಿ ಅವರ ಹೆಸರಿನ ವೃತ್ತ ಉದ್ಘಾಟಿಸಿರುವುದು ನಿಜಕ್ಕೂ ಒಳ್ಳೆಯ ಕೆಲಸವಾಗಿದೆ ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದಲ್ಲಿ ಭಾವೈಕ್ಯತೆ ಮರೆಯಾಗಿ ಅನಗತ್ಯವಾಗಿ ಭಿನ್ನಾಭಿಪ್ರಾಯ ಹುಟ್ಟು ಹಾಕಿ ಶಾಂತಿ ಕದಡುವ ಯತ್ನ ನಡೆಯುತ್ತಿರುವುದೆ. ಇದು ಅಭಿವೃದ್ಧಿಯ ಹಿನ್ನಡೆಯ ಸಂಕೇತವಾಗಿದೆ. ಹೀಗಾಗಿ ನಾವು ಹೆಚ್ಚು ಮಹತ್ವ ಕೊಡದೇ ಎಲ್ಲರೂ ಪರಸ್ಪರ ಸಹೋದರ ಮನೋಭಾವ ಹೊಂದಿ ಮಾನವ ಧರ್ಮ ಉಳಿಸಿ ಬೆಳಸಿಕೊಂಡು ಹೋಗುವ ಪ್ರಯತ್ನ ಮಾಡಬೇಕು ಎಂದರು.
ಮಾಜಿ ಶಾಸಕ ಕೆ.ಶರಣಪ್ಪ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಮ್ಮದಿ ಸಂದೇಶ ಸಾರಿರುವ ಬಸವಾದಿ ಶರಣರ ಸ್ಮರಣಾರ್ಥ ಬಸವಪ್ರಿಯ ಹಡಪದ ಅಪ್ಪಣ್ಣನವರ ಹೆಸರಿನಲ್ಲಿ ವೃತ್ತವನ್ನು ಸ್ಥಾಪಿಸಿರುವುದು ಸಮಾಜ ಮೆಚ್ಚುಗೆ ಕಾರ್ಯವಾಗಿದೆ ಎಂದರು.
ಪುರಸಭೆಯ ಅಧ್ಯಕ್ಷ ಗಂಗಾಧರಯ್ಯ ಹಿರೇಮಠ ವೃತ್ತವನ್ನು ಉದ್ಘಾಟಿಸಿದರು. ಸಿಪಿಐ ನಿಂಗಪ್ಪ ಆರ್, ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವ ಬಯ್ಯಾಪೂರ, ಬಸವರಾಜ ನಾಯಕ, ಬಸವ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ್, ಪುರಸಭೆ ಸದಸ್ಯ ವಸಂತ ಮೇಲಿನಮನಿ, ನಿರ್ಮಿತಿ ಕೇಂದ್ರ ಇಂಜಿನೀಯರ್ ಆದೇಶ್, ಹಡಪದ ಸಮಾಜದ ಅಧ್ಯಕ್ಷ ಎಚ್.ಪುತ್ರಪ್ಪ, ಕಾರ್ಯದರ್ಶಿ ಮಹಾಂತೇಶ ಅಮರಾವತಿ, ಪ್ರಮುಖರಾದ ರುದ್ರಪ್ಪ ಹಡಪದ, ಶಿವಪ್ಪ ಇಟ್ಟಂಗಿ, ಮಲ್ಲಪ್ಪ ಹಡಪದ, ಶರಣಪ್ಪ ಆಡೂರು, ನಿಲಕಂಠಬಾಬು ನಿಲೋಗಲ್, ಮಾಜಿ ಸೈನಿಕ ಶಿವಾಜಿ ಹಡಪದ, ರಾಮನಗೌಡ ಪಾಟೀಲ್, ಶಿವಸಂಗಪ್ಪ ಬಿಜಕಲ್, ದೊಡ್ಡಪ್ಪ ಕಂದಗಲ್ಲ, ಮಾರುತಿ ಹಲಗಿ ಇತರರು ಉಪಸ್ಥಿತರಿದ್ದರು. ಶಿಕ್ಷಕ ಎಚ್. ಜಿ. ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು..!!
.