ಆಕಸ್ಮಿಕ ಬೆಂಕಿಗೆ ಶೇಂಗಾ ಫಸಲು ಆಹುತಿ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : 3 ಲಕ್ಷ ರೂಪಾಯಿಗಳ ಮೌಲ್ಯದ ಶೇಂಗಾ ಕಾಯಿ ಸೇರಿದ ಬಳ್ಳಿಯ ಬಣವಿವೊಂದು ಆಕಸ್ಮಿಕ ಬೆಂಕಿಗೆ ಆಹುತಿಯಾಗಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ನೀರಲೂಟಿ ಜಮೀನಿನಲ್ಲಿ ಜರುಗಿದೆ..!

ಸುಟ್ಟು ಬಸ್ಮವಾಗಿರುವ ಬಣವಿ ನೀರಲೂಟಿ ಗ್ರಾಮದ ಹನುಮಂತ ತಂದೆ ಸಣ್ಣ ಹನುಮಂತಪ್ಪ ಚಳ್ಳಾರಿ ಎಂಬ ರೈತನಿಗೆ ಸೇರಿದ್ದಾಗಿದೆ. 4 ಎಕರೆ ನೀರಾವರಿ ಜಮೀನಿನಲ್ಲಿ ಬೆಳೆದಿರುವ ಸುಮಾರು 3 ಲಕ್ಷ ರೂಪಾಯಿಗಳಿಗೂ ಅಧಿಕ ಬೆಲೆ ಬಾಳುವ ಶೇಂಗಾ ಕಾಯಿ ಸೇರಿದ ಬಳ್ಳಿ ಹಾಗೂ ಹೊಟ್ಟು ಮತ್ತು ಸೊಪ್ಪೆಯ ಬಣವಿಗಳು ಸಂಪೂರ್ಣ ಸುಟ್ಟು ಬೂದಿಯಾಗಿವೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಷ್ಟಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ, ಆ ಸಮಯಕ್ಕೆಗಾಗಲೇ ಬಣವಿ ಬೆಂಕಿಗೆ ಆಹುತಿಯಾಗಿದೆ. ಲಕ್ಷಾಂತರ ರೂಪಾಯಿಗಳ ಮೌಲ್ಯದ ಶೇಂಗಾ ಕಾಯಿ ಸೇರಿದಂತೆ ಬಳ್ಳಿ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತನಿಗೆ ಸರ್ಕಾರ ಕೂಡಲೇ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ..!!