ಅಂತರ ವಿವಿ ಖೋಖೋ ಕ್ರೀಡಾಕೂಟದಲ್ಲಿ ಮಿಂಚಿದ ಕುಷ್ಟಗಿ ಪ್ರತಿಭೆಗಳು

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕೋಲಾರ ಜಿಲ್ಲೆಯಲ್ಲಿ ಜರುಗಿರುವ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯ ಖೋಖೋ ಪಂದ್ಯಾವಳಿಯಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೂರು ಜನ ಕ್ರೀಡಾಪಟುಗಳು ಭಾಗಿಯಾಗಿರುವುದು ವಿಶೇಷ..!

ಖೋಖೋ ಜಿಲ್ಲಾ ತರಬೇತಿದಾರ ಎ.ಎನ್.ಯತಿರಾಜು

ಕುಷ್ಟಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶಿವಕುಮಾರ ಶರಣಪ್ಪ ಬನ್ನಿಗೋಳ, ನಾಗರಾಜ ಬಸಪ್ಪ ಮೂಲೀಮನಿ ಹಾಗೂ ಭೀಮಣ್ಣ ತಳವಾರ ಮೂರು ಜನ ಕ್ರೀಡಾಪಟುಗಳು ಬಳ್ಳಾರಿ ವಿಜಯನಗರ ಶ್ರೀಕೖಷ್ಣದೇವರಾಯ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದಾರೆ.

‌ಕ್ರೀಡಾಪಟುಗಳಿಗೆ ತರಬೇತಿ ನೀಡಿದ ಜಿಲ್ಲಾ ಖೋಖೋ ತರಬೇತಿದಾರ (ಎನ್.ಐ.ಎಸ್) ಎ.ಎನ್.ಯತಿರಾಜು, ದೈಹಿಕ ಶಿಕ್ಷಣ ಶಿಕ್ಷಕಿ ಅನಿತಾ, ಶ್ರೀ ಸ್ವಾಮಿ ವಿವೇಕಾನಂದ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶರಣು ಎನ್ ತೆಗ್ಗಿಹಾಳ ಸೇರಿದಂತೆ ಅಪಾರ ಜನ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ..!!