ಕುಷ್ಟಗಿ ತಾಲೂಕಾ ಭೂನ್ಯಾಯ ಮಂಡಳಿಗೆ ಸದಸ್ಯರ ನೇಮಕ


ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಭೂನ್ಯಾಯ ಮಂಡಳಿಗೆ ನಾಲ್ಕು ಜನ ಸರಕಾರೇತರ ಸದಸ್ಯರನ್ನು ನಾಮನಿರ್ದೇಶನ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ..!

ಕುಷ್ಟಗಿ ತಾಲೂಕಿನ ಕಾಟಾಪೂರ ಗ್ರಾಮದ ತಾಲೂಕಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿದ್ದಪ್ಪ ಆವಿನ, ಚಳಗೇರಾ ಗ್ರಾಮದ ಸತ್ಯಾನಾರಾಯಣ ಪ್ರಲ್ಹಾದಾಚಾರ್ಯ ಕುಲಕರ್ಣಿ, ಕಂದಕೂರು ಗ್ರಾಮದ ದೊಡ್ಡಪ್ಪ ಈಶಪ್ಪ ನವಲಹಳ್ಳಿ ಹಾಗೂ ತಾವರಗೇರಾದ ನ್ಯಾಯವಾದಿ ಪಿ.ರಮೇಶ ಮ್ಯಾತ್ರಿ ಅವರನ್ನು ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಜಗದೀಶ್. ಕೆ ಅವರು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ಕಲಂ 48 ಉಪ ಕಲಂ (1) ರಿಂದ (3) ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಾಮನಿರ್ದೇಶನಗೊಳಿಸಿದ್ದಾಗಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ..!!