ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಘಟಕ ವತಿಯಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ ಅವರ ಜನ್ಮ ದಿನದ ಅಂಗವಾಗಿ ಅವರ ಸವಿ ನೆನಪಿಗಾಗಿ ಸಂಭ್ರಮದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..!
ಪುನೀತ ರಾಜಕುಮಾರ ಅವರ ಹುಟ್ಟು ಹಬ್ಬದ ನಿಮಿತ್ಯ ಹನುಮಸಾಗರ ಪಟ್ಟಣದಲ್ಲಿ ಬೈಕ್ ರ್ಯಾಲಿ, ಪುನೀತರಾಜಕುಮಾರ ಹೆಸರಿನಲ್ಲಿ ವೃತ್ತ , ರಕ್ಷಣಾ ವೇದಿಕೆಯ ನಾಮಫಲಕ ಹಾಗೂ ವೀರಯೋಧರಿಗೆ ಸನ್ಮಾನ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಮಾತನಾಡಿ, ನೆಲ, ಜಲ, ಗಡಿ, ಭಾಷೆ ರಕ್ಷಿಸುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಂದಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ನಟ ಪುನೀತ್ ಅವರು ತಂದೆ ರಾಜಕುಮಾರ ಅವರನ್ನು ಮೀರಿಸಿದ ಶ್ರೇಯಸ್ಸು ಸಲ್ಲುತ್ತದೆ. ನಮ್ಮನ್ನಗಲಿದ ಪುನೀತರಾಜಕುಮಾರ ಅವರಿಗೆ ದೇಶದಲ್ಲಿಯೇ ಅತಿ ಹೆಚ್ಚು ಜನ ಕಂಬಿನಿ ಮೀಡಿದಿದ್ದು ಇತಿಹಾಸ ಎಂದರು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲುರು, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪಾಟೀಲ, ಕರವೇ ಜಿಲ್ಲಾಧ್ಯಕ್ಷ ಸಂಜಯ ಖಟವಟೆ, ಪಿಡಿಓ ನಿಂಗಪ್ಪ ಮೂಲಿಮನಿ, ಪರಶುರಾಮ ಗುಡದಲದಿನ್ನಿ, ಮಂಜುನಾಥ ಶಿರೋಳ, ಮಲ್ಲಿಕಾರ್ಜುನ ಶಾಡಲಗೇರಿ ಸೇರಿದಂತೆ ಇನ್ನಿತರರಿದ್ದರು..!!