ಶಿಕ್ಷಕ ಅರವಿಂದ ಕುಮಾರ ದೇಸಾಯಿ ಇನ್ನಿಲ್ಲ

 

 

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಪಟ್ಟಣದ ನಿವಾಸಿ ಶಿಕ್ಷಕ ಅರವಿಂದ ಕುಮಾರ್ ದೇಸಾಯಿ ದಿನಾಂಕ 19-03-2022 ರಂದು ಸ್ವಗೃಹದಲ್ಲಿ ಬೆಳಿಗ್ಗೆ ನಿಧನರಾಗಿದ್ದಾರೆ.

ಮೃತರು ಓರ್ವ ಪುತ್ರಿ, ತಂದೆ-ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ. ತಾಲೂಕಿನ ಚಳಗೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಕರಾಗಿ ಸೇವೆಯಲ್ಲಿದ್ದರು. ಶಿಕ್ಷಕ ವೃತ್ತಿಗೂ ಮುನ್ನ ಕೆಲ ವರ್ಷಗಳ ಕಾಲ ಇಂಡಿಯನ್ ಎಕ್ಸ್‌ಪ್ರೆಸ್ ಹಾಗೂ ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳಿಗೆ ಸ್ಥಳೀಯ ಸುದ್ದಿ ಸಂಗ್ರಹಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದ ಸುದ್ದಿ ತಿಳಿದ ತಾಲೂಕಿನ ಶಿಕ್ಷಕ ವೃಂದ ಸೇರಿದಂತೆ ಪತ್ರಿಕಾ ಮಿತ್ರರು ಕಂಬನಿ ಮಿಡಿದಿದ್ದಾರೆ.
ಮೃತರ ಅಂತ್ಯಕ್ರಿಯೆ ಪಟ್ಟಣದ ಹೊರವಲಯ ಬ್ರಾಹ್ಮಣ ಸಮುದಾಯದ ಸ್ಮಶಾನದಲ್ಲಿ ಮದ್ಯಾಹ್ನ 3 ಗಂಟೆಗೆ ನೆರವೇರಿಸುವದಾಗಿ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ..!!