ತಾವರಗೇರಾ ಭಾಗದಲ್ಲಿ ಆಣೆಕಲ್ಲು ಮಳೆ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ಮೆತ್ತಿನಾಳ ಗ್ರಾಮ ಸೇರಿದಂತೆ ಈ ಭಾಗದಲ್ಲಿ ಆಣೆಕಲ್ಲು ಮಳೆ ಸುರಿದಿರುವುದು ವಿಶೇಷ..!

ಜಿಲ್ಲೆಯ ಸಂಗನಾಳ, ಮೆತ್ತಿನಾಳ, ಕನ್ನಾಳ, ತೆಮ್ಮಿನಾಳ, ಗಂಗನಾಳ ಸೇರಿದಂತೆ ಈ ಭಾಗದಲ್ಲಿ ಆಣೆಕಲ್ಲು ಮಳೆ ಆಗಿದೆ. ರೈತರಿಗೆ ವರ್ಷದ ಮೊದಲ ಮಳೆಯ ಆನಂದ ಅನಂದವೇ.. ಅದರಲ್ಲಿ ಆಣೆಕಲ್ಲು ತುಣುಕುಗಳನ್ನು ಕಂಡ ಮಕ್ಕಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಕೆಡುಕಿನ ಮಳೆ ಎಂದು ಹೇಳುವ ಕೃಷಿಕರು ಇಂತಹ ಹಳೆ ಮಳೆ ಸುರಿಯುವುದರಿಂದ ಮುಂದೆ ಮಳೆ ಕಡಿಮೆ ಪ್ರಮಾಣದಲ್ಲಿ ಆಗುವ ಕುರಿತು ಆತಂಕವ್ಯಕ್ತಪಡಿಸಿದ್ದಾರೆ. ಏನೇ ಆಗಲಿ, ಉರಿಯುವ ಬಿಸಿಲಿಗೆ ಬಸವಳಿದ ಜನರು ಮೊದಲ ಬಗ್ಗೆ ಹರ್ಷ ಕೂಡಾ ವ್ಯಕ್ತಪಡಿಸಿದ್ದಾರೆ..!!