ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಶಾಲೆಯಲ್ಲಿ ಹೆಚ್ಚುವರಿ ತರಗತಿಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ನಾರಾಯಣ ಚೌದ್ರಿ ಅಭಿಪ್ರಾಯವ್ಯಕ್ತಪಡಿಸಿದರು..!
ಶಾಲೆಯಲ್ಲಿ ನೂತನವಾಗಿ ಅಳವಡಿಸಲಾದ ಸ್ಮಾರ್ಟ್ ಕ್ಲಾಸ್ ಗೆ ಚಾಲನೆ ಹಾಗೂ ಹತ್ತನೇ ತರಗತಿ ಮಕ್ಕಳ ಫಲಿತಾಂಶ ಸುಧಾರಣೆ ಹಿನ್ನಲೆಯಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಪ್ರಾಯವ್ಯಕ್ತಪಡಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಶಾಲಾ ಸುಧಾರಣಾ ಸಮಿತಿ ನೆರವು ಮೂಲಕ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದೆ. ಬದಲಾವಣೆಗೆ ಶಾಲೆಯ ಶಿಕ್ಷಕರು, ಪಾಲಕರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರ ಬೆಂಬಲವೇ ಮೂಲ ಕಾರಣವಾಗಿದೆ ಎಂದರು. ಮುಖಂಡರಾದ ಶರಣಗೌಡ ಪೊಲೀಸ್ ಪಾಟೀಲ, ಪೃಥ್ವಿರಾಜ ದೇಸಾಯಿ, ಶರಣಗೌಡ ಮ್ಯಾಗಳಮನಿ, ಪರಸಪ್ಪ ತೆವರನ್ನವರ, ನಾಗಪ್ಪ ತೆವರನ್ನವರ ಶಿಕ್ಷಕರಾದ ದೊಡ್ಡನಗೌಡ ಹೆಚ್.ಗೌಡರ, ಹನುಮಂತಪ್ಪ ಲಮಾಣಿ, ಶಿವಾಜಿ ಹಂಪಳಕರ್, ಎಸ್.ಜೆ.ಕಳಕಾಪೂರ ಹಾಗೂ ಯಾಸ್ಲೀಂ ಬೇಗಂ ಸೇರಿದಂತೆ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು..!!
ಸ್ಥಳೀಯ ಸಂಪನ್ಮೂಲಗಳ ಬಳಕೆ ಮೂಲಕ ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಇನ್ನೂ ಅಭಿವೃದ್ಧಿಗೆ ಶ್ರಮಿಸಲಾಗುವುದು.”
– ರಂಗಪ್ಪ ತಳ್ಳಿಹಾಳ
ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು,
ಸರಕಾರಿ ಪ್ರೌಢ ಶಾಲೆ, ಮಾಲಗಿತ್ತಿ.
– ಎಸ್ಸೆಸ್ಸೆಲ್ಸಿ ಫಲಿತಾಂಶ ಬದಲಾವಣೆಗೆ ಶಿಕ್ಷಕರ ಶ್ರಮ ಬಹಳಷ್ಟಿದೆ.”
– ಶಿವನಗೌಡ ಪಾಟೀಲ
ಗ್ರಾಮ ಪಂಚಾಯತಿ ಸದಸ್ಯರು,
ಮಾಲಗಿತ್ತಿ.