ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ವಾರಿಕಲ್ ಗ್ರಾಮದ ಜಮೀನೊಂದರಲ್ಲಿ ಕಟ್ಟಿ ಹಾಕಿದ ಆಕಳಗಳ ಮೇಲೆ ಚಿರತೆ ದಾಳಿಗೆ ಆಕಳವೊಂದು ಬಲಿಯಾಗಿರುವ ಘಟನೆ ಜರುಗಿದೆ..!
ಕುಷ್ಟಗಿ ತಾಲೂಕಿನ ಹಿರೇಗೋಣ್ಣಾಗರ ಗ್ರಾಮದ ಭರಮಪ್ಪ ಯಲ್ಲಪ್ಪ ಜಾಲಿಮರದ ಅವರಿಗೆ ಸೇರಿದ ಆಕಳು ಎಂದು ತಿಳಿದು ಬಂದಿದೆ. 02-04-2022 ರಂದು ತಡ ರಾತ್ರಿ ಘಟನೆ ಜರುಗಿದೆ ಎನ್ನಲಾಗಿದೆ. ಆಕಳನ್ನು ಕಳೆದುಕೊಂಡ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ರೈತ ಕುಟುಂಬ ಒತ್ತಾಯಿಸಿದೆ.
ಭೇಟಿ : ಉಪವಲಯ ಅರಣ್ಯಾಧಿಕಾರಿ ಲಾಲಸಾಬ್ ಸೂಳಿಬಾವಿ, ಅರಣ್ಯ ರಕ್ಷಕ ಕಳಕಪ್ಪ ಬ್ಯಾಳಿ, ಶಂಕರಗೌಡ ಅಕ್ಕೇರಿ, ಶೇಖಪ್ಪ ರಾಠೋಡ, ಮಾಯಪ್ಪ , ದೇವೇಂದ್ರಪ್ಪ ಸ್ವಾಮಿ ಭೇಟಿ ನೀಡಿ ದಾಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆ : ಚಿರತೆ ದಾಳಿಗೆ ಬಲಿಯಾಗಿರುವ ಆಕಳ ಪರೀಕ್ಷೆ ಪರಿಶೀಲನೆ ನಡೆಸುವ ಮೂಲಕ ವನ್ಯ ಪ್ರಾಣಿ ದಾಳಿಯನ್ನು ಪಶು ವೈದ್ಯಾಧಿಕಾರಿ ಡಾ.ಸಂತೋಷ ಕುದರಿ ದೃಢಪಡಿಸಿದರು. ರಾಜು ಉಪ್ಪಾರ, ರಂಗಪ್ಪ ವಾಲಿಕಾರ, ಲಕ್ಷ್ಮಣ, ರಾಜೇಸಾಬ್ ನಧಾಫ, ವೀರೇಶ ಕಾಜಗಾರ, ಆನಂದ ಡಬೇರ, ಹನುಮಪ್ಪ ಯಲ್ಲಪ್ಪ ಜಾಲಿಮರದ ಸೇರಿದಂತೆ ರೈತರು ಉಪಸ್ಥಿತರಿದ್ದರು. ಚಿರತೆಯ ನಿರಂತರ ದಾಳಿಗೆ ರೈತರು ಬೇಸತ್ತು ಹೋಗಿದ್ದಾರೆ. ಸಂಬಂಧಿಸಿದ ಇಲಾಖೆ ಕ್ರಮಕ್ಕೆ ಮುಂದಾಗಬೇಕೆಂದು ರೈತರು ಒತ್ತಾಯಪಡಿಸಿದರು..!!