ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಾಲಿಯ ಮರವೂ.. ನೆರಳಲ್ಲಾ… ಮಗಳೇ.. ಎಂಬ ಜಾನಪದ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಫೇಮಸ್. ಇಂತಹ ವಿಶಿಷ್ಟ ಜಾನಪದದ ಸಾಲಿನಲ್ಲಿ ಪ್ರಸ್ತಾಪವಾಗುವ ‘ಜಾಲಿ ಮರ’ ಮಾತ್ರ ಯಾರಿಗೂ ಬೇಡವಾದದ್ದು. ನೆರಳು ನೀಡದಿರುವ ಹಾಗೂ ಅತಿ ಹೆಚ್ಚು ಮುಳ್ಳುಗಳನ್ನು ಹೊಂದಿರುವ ಕಾರಣಕ್ಕೆ ಜಾಲಿಮರವನ್ನು ಇಡೀ ಮನುಕುಲ ಆಶ್ರಯವನ್ನು ಪಡೆಯದಿರುವುದು ವಿರಳ. ಯಾರಿಗೂ ಬೇಡವಾದ ಇಂತಹ ಜಾಲಿ ಮರಕ್ಕೆ ‘ಯುಗಾದಿ’ ಹಬ್ಬದ ಸಂದರ್ಭದಲ್ಲಿ ಖುದ್ದು ಪ್ರಕೃತಿಯೇ ಅಲಂಕಾರಕ್ಕೆ ಮುಂದಾಗುವುದು ವಿಶೇಷ ಅಲ್ಲವೇ..!?
ಕೃಷಿಕರ ಪಾಲಿಗೆ ನೂತನ ವರ್ಷವಾದ ಯುಗಾದಿ ಸಂದರ್ಭದಲ್ಲಿ ಪ್ರಕೃತಿ ತನ್ನ ಮೂಲ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತದೆ. ಇಂತಹ ಅಮೂಲಾಗ್ರ ಬದಲಾವಣೆ ಕಾಲಘಟ್ಟದಲ್ಲಿ ಎರ್ರಾ..ಬಿರ್ರೀ.. ಬಿಸುವ ಗಾಳಿ, ಗುಡುಗು ಸೇರಿದಂತೆ ಮಳೆಯಲ್ಲಿ ಹಾರಿ ಬರುವ ತರವೇಹಾರಿ ಬೀಸಾಡಿದ ಚಿಂದಿ ಬಟ್ಟೆಗಳನ್ನ (ಕರಿ) ಜಾಲಿಮರಕ್ಕೆ ಹಾರಿ ಬೀಡುವುದು ವಿಶೇಷ. ಜಾಲಿಮರದ ಮುಳ್ಳುಗಳಿಗೆ ಯಾವ ತಂತ್ರಜ್ಞಾನಕ್ಕೂ ಕಡಿಮೆ ಇಲ್ಲದಂತೆ ಚಿಂದಿ ಬಟ್ಟೆಗಳನ್ನು ಒಂದನ್ನೊಂದು ಮುತ್ತಿನಂತೆ ಹೆಣೆಯುವ ಪ್ರಕೃತಿಯ ಈ ಮಹತ್ವ ಕಾರ್ಯ ಮಾತ್ರ ಸೂಜಿಗದ ಕೆಲಸ. ತನ್ನ ಮಡಿಲಲ್ಲಿರುವ ಲಕ್ಷಾಂತರ ವೃಕ್ಷ ಪ್ರಭೇದಗಳ ಮಧ್ಯದಲ್ಲಿ ಜಾಲಿ ಮರವನ್ನೇ ಆಯ್ದುಕೊಂಡು ಅಲಂಕಾರಗೊಳಿಸುವ ಪ್ರಕೃತಿಯ ವಿಭಿನ್ನತೆ ಮೆಚ್ಚಲೇಬೇಕು. ವಿಶೇಷವಾಗಿ ರಸ್ತೆಗಳ ಬದಿಯಲ್ಲಿ ಬೆಳೆದಿರುವ ಜಾಲಿಮರಗಳು ಚಿಂದಿ ಬಟ್ಟೆಗಳ ಮೂಲಕ ಅಲಂಕಾರಿಕವಾಗಿರುವುದನ್ನು ಬಹುತೇಕ ಕಡೆಗಳಲ್ಲಿ ಗಮನಿಸಬಹುದು. ಮನುಷ್ಯ ಮಾಡದಿರುವ ಪ್ರಕೃತಿಯ ಈ ಕೈಚಳಕವನ್ನು ಗಮನಿಸುವ ಅರಣ್ಯ ಪ್ರಿಯರು ಪ್ರಕೃತಿಗೊಂದು ನಿತ್ಯ ಸಲಾಂ ಹೇಳುತ್ತಿದ್ದಾರೆ..!!
– ಕೃಷಿ ಪ್ರಿಯರಿಗೆ ಮತ್ತೊಮ್ಮೆ ಯುಗಾದಿ ಹಬ್ಬದ ಶುಭಾಶಯಗಳ ಜೊತೆಗೆ ನೂತನ ವರ್ಷಕ್ಕೆ ಬೇವು ಬೆಲ್ಲದ ಮೂಲಕ ಸ್ವಾಗತ..!
ಶರಣಪ್ಪ ಕುಂಬಾರ
ಸಂಪಾದಕರು
ಕೃಷಿ ಪ್ರಿಯ, ಪತ್ರಿಕೆ.
ಪ್ರಕೃತಿ ನೋಡಿದ ದೃಷ್ಟಿಕೋನ ಅದ್ಭುತ, ಕವಿಮನ, ಚಿಕಿತ್ಸಕಮನ ,ರಚನಾತ್ಮಕ ಸಾಹಿತ್ಯ ಕೃಷಿಯ ಸಂಕೇತವಾಗಿ,ಮೂಡಿ ಬಂದ ಲೇಖನ ಉದಯೋನ್ಮುಖ ಪೀಳಿಗೆಯ ರಚನಾತ್ಮಕ ಬೆಳವಣಿಗೆಗೆ ಮಾರ್ಗದರ್ಶಿ. ಸಾಹಿತ್ಯ ರಚನಾ ವಸ್ತು ಸಂದೇಶ ನೀಡುವ ವಿಶಿಷ್ಟ ರೀತಿಗೆ ಧನ್ಯವಾದಗಳು ಶರಣು ಸರ್.
ಇಂತಿ ತಮ್ಮ ಸಹೃದಯ ಓದುಗ
ದಾವಲ್ ಸಾಬ್
ಕುಷ್ಟಗಿ