ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಬಹುತೇಕ ಬಾರ್ ಎಂಡ್ ರೆಸ್ಟೋರೆಂಟ್ ಗಳಲ್ಲಿ ಮದ್ಯ ಖಾಲಿಯಾಗಿರುವ ಸುದ್ದಿ ಬೆಳಕಿಗೆ ಬಂದಿದೆ..!
ದಿನಾಂಕ 05-04-2022 ರಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ಮದ್ಯಂಗಡಿಗಳಲ್ಲಿ ಎಣ್ಣೆ ಖಾಲಿಯಾಗಿದೆ. ಕೆಲ ಅಂಗಡಿಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ಮದ್ಯ ಸ್ಟಾಕ್ ಇದೆ ಎಂದು ತಿಳಿದುಬಂದಿದೆ. ಇನ್ನೇನು ಎರಡು ಮೂರು ದಿನಗಳಲ್ಲಿ ಮದ್ಯ ಖಾಲಿಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ಲಭ್ಯವಾಗಿದೆ. ನೂತನ ಸಾಫ್ಟ್ವೇರ್ ಅಪ್ಡೇಟ್ ಆಗಿರುವ ಹಿನ್ನೆಲೆಯಲ್ಲಿ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗುತ್ತಿಲ್ಲ. ಕೆಎಸ್ಬಿಸಿಎಲ್ನಿಂದ ಬಾರ್ಗಳಿಗೆ ಮದ್ಯ ಪೂರೈಕೆಯಾಗುತ್ತಿಲ್ಲ ಎಂಬ ಮಾಹಿತಿ ಕೂಡಾ ಹೊರಬಿದ್ದಿದೆ. ಮದ್ಯ ಸ್ಟಾಕ್ ಗೂಡಾನಗಳ ಮುಂದೆ ವಾಹನಗಳ ಸಾಲುಗಟ್ಟಿ ನಿಂತಿರುವುದು ಕೂಡಾ ಕೊರತೆ ಸ್ಪಷ್ಟಪಡಿಸಿವೆ..!!