ಮನೆ ಕಳ್ಳತನ : ಆತಂಕದಲ್ಲಿ ಕುಷ್ಟಗಿ ನಿವಾಸಿಗಳು

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಪಟ್ಟಣದ ರಾಯಬಾಗಿ ಲೈಔಟ್ ವಾಸವಿ ನಗರದಲ್ಲಿನ ಮನೆಯ ಬಾಗಿಲು ಬೀಗ ಮುರಿದು ಕಳತನ ಮಾಡಿರುವ ಘಟನೆ ನಡೆದಿರುವುದು 05-04-2022 ರಂದು ತಿಳಿದುಬಂದಿದ್ದು, ನಿವಾ‌ಸಿಗಳಲ್ಲಿ ಆತಂಕ ಮನೆಮಾಡಿದೆ..!

 

ವಿಜಯ ಆಚಾರ ಎಂಬುವರಿಗೆ ಸೇರಿದ ಮನೆ ಎಂದು ತಿಳಿದುಬಂದಿದೆ. ಒಬ್ಬರೇ ಮನೆಯಲ್ಲಿ ವಾಸವಾಗಿದ್ದರು. ವೈಯಕ್ತಿಕ ಕೆಲಸದ ನಿಮಿತ್ತ
ಕಳೆದೆರಡು ದಿನಗಳ ಹಿಂದೆ ಊರಿಗೆ ಹೋಗಿರುವದನ್ನು ಖಚಿತಪಡಿಸಿಕೊಂಡ ಕಳ್ಳರು ರಾತ್ರಿ ವೇಳೆ ಬೀಗ ಮುರಿದು ಮನೆ ಜಾಲಾಡಿದ್ದಾರೆ. ಏನು ದೋಚಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ, ಮನೆಯಲ್ಲಿ ಖಾಗದ ಪತ್ರ ಹಾಗೂ ಬಟ್ಟೆ ಮತ್ತು ಪೂಜಾ ಸಾಮಗ್ರಿ ಹೊರತುಪಡಿಸಿ ಬೇರೇನೂ ಇದ್ದಿಲ್ಲ ಎಂದು ಮನೆಯ ಮಾಲಿಕ ಅಕ್ಕಪಕ್ಕದ ಪರಿಚಿತರಿಗೆ ಫೋನ್ ಮೂಲಕ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದರು. ಮುರಿದ ಬೀಗದ ಪತ್ತ ಹಾಗೂ ಬೀಗ ಮುರಿಯಲು ಬಳಸಿದ ಸ್ಕೃಡ್ರೈವರ್ ಬಿದ್ದಿರುವದನ್ನು ವೀಕ್ಷಿಸಿ, ಬಳಿಕ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದ್ದಾರೆ. ಕಳ್ಳತನವಾದ ದಿನವೇ ಅದೇ ಲೇಔಟಿನ ಒಂಟಿ ಮಹಿಳೆ ವಾಸವಿರುವ ಮನೆಯೊಂದರಲ್ಲಿ ರಾತ್ರಿ ಒಂದು ಗಂಟೆ ಸುಮಾರಿಗೆ ಮನೆಯ ಬಾಗಿಲನ್ನು ಯಾರೋ ತಟ್ಟಿದಾಗ ಬಾಗಿಲು ತೆರೆಯಲು ಮುಂದಾಗಲಿಲ್ಲ ಎಂದು ಮಹಿಳೆ ನಡೆದ ಘಟನೆ ಕುರಿತು ವಿವರಿಸಿದರು. ವಾರ್ಡಿಗೆ ಮೂಲಭೂತ ಸೌಲಭ್ಯಗಳ ಪೂರೈಕೆಗೆ ಹನುಮೇಶ ಜೋಷಿ, ಬುರಾನ ಟೇಲರ್, ಶರಣಪ್ಪ, ಮಲ್ಲಪ್ಪ, ವೀರಭದ್ರಪ್ಪ ಮತ್ತಿತರರು ಒತ್ತಾಯಿಸಿದ್ದಾರೆ..!!