ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಪಟ್ಟಣದ ಗಜೇಂದ್ರಗಡ ರಸ್ತೆಯ ಬಳಿ ಇರುವ ವಿದ್ಯುತ್ ಕಂಬಗಳ ಸುತ್ತಲೂ ಗಿಡ, ಗಂಟಿ ಬೆಳೆದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ..!
ಪಟ್ಟಣದ ಮಾರುತಿ ವೃತ್ತದಿಂದ ಗಜೇಂದ್ರಗಡ ಮುಖ್ಯ ರಸ್ತೆ ಕನಕದಾಸ ವೃತ್ತ, ಬಸವೇಶ್ವರ ವೃತ್ತದಿಂದ ವಾಲ್ಮೀಕಿ ವೃತ್ತ, ನ್ಯಾಯಾಲಯ, ಲೋಕೋಪಯೋಗಿ ಇಲಾಖೆ ಸೇರಿದಂತೆ ಬಹುತೇಕ ರಸ್ತೆಗಳ ಬದಿಯಲ್ಲಿ ಅಳವಡಿಸಿರುವ ವಿದ್ಯುತ್ ದೀಪದ ಕಂಬಗಳಿಗೆ ದೊಡ್ಡ ದೊಡ್ಡ ಮರದ ಟೊಂಗೆಗಳು ಆವರಿಸಿವೆ. ತಾಲೂಕು ಪಂಚಾಯಿತಿ ಮಳಿಗೆಗಳ ಮುಂದೆ ವಿದ್ಯುತ್ ಪ್ರಸಾರ ಹೊಂದಿರುವ 3ಫೇಸ್, 2ಫೇಸ್ ವಿದ್ಯುತ್ ತಂತಿಗಳ ಸಂಪರ್ಕ ಇರುವ ಕಂಬಗಳ ಸುತ್ತಲೂ ಗಿಡದ ಟೊಂಗೆಗಳು ತಾಗಿಕೊಂಡಿವೆ. ಸ್ಥಳೀಯ ಜೆಸ್ಕಾಂ ಉಪ ವಿಭಾಗ ಕಚೇರಿ ಅಧಿಕಾರಿಗಳು ಎಚ್ಚೆತ್ತು ಗಿಡ-ಗಂಟೆಗಳನ್ನು ತೆರವುಗೊಳಿಸಬೇಕು. ಇದರಿಂದ ಮುಂದೆ ಸಂಭವಿಸಬಹುದಾದ ವಿದ್ಯುತ್ ಅವಘಡ ತಪ್ಪಿಸಲು ಕೂಡಲೇ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ..!!