ಕ್ರಿಕೆಟ್‌ ಬೆಟ್ಟಿಂಗ್ : ಒಬ್ಬನ ಬಂಧನ ಓರ್ವ ಪರಾರಿ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯ ಟೆಂಗುಂಟಿ ಗ್ರಾಮಕ್ಕೆ ತೆರಳುವ ಕ್ರಾಸ್ ಹತ್ತಿರದಲ್ಲಿ ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿಕೊಂಡಿದ್ದ ಗುಂಪಿನ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸ್ಥಳೀಯ ಪೋಲೀಸರು ಒಬ್ಬನನ್ನು ವಶಕ್ಕೆ ಪಡೆದರೆ ಮತ್ತೋರ್ವ ಪರಾರಿಯಾದ ಘಟನೆ ದಿನಾಂಕ 08-04-2022 ರಂದು ನಡೆದಿದೆ.!

ಐಪಿಎಲ್ ಕ್ರಿಕೆಟ್ ಗುಜರಾತ್ ಟಯಟಾನ್ಸ್ ಮತ್ತು ಪಂಜಾಬ್ ಕಿಂಗ್ ಇಲೆವೇನ್ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ಆಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಚದುರಿದ ಗುಂಪಿನಲ್ಲಿ ಬಲೆಗೆ ಬಿದ್ದ ಆರೋಪಿ ಮಲ್ಲಪ್ಪ ತಂದೆ ಬಾಲಪ್ಪ ಕುರ್ನಾಳ ಎಂದು ಗುರುತಿಸಲಾಗಿದೆ. ಆತನ ಬಳಿ ಇದ್ದ ರೂ.1850 ರೂಪಾಯಿಗಳು ಮತ್ತು ಬೆಟ್ಟಿಂಗಗೆ ಉಪಯೋಗಿಸುತ್ತಿದ್ದ ಒಂದು ಮೊಬೈಲ್ ಪೋಲೀಸರು ವಶಕ್ಕೆ ಪಡೆದು ಆತನನ್ನು ಬಂಧಿಸಿದ್ದಾರೆ. ಮತ್ತೋರ್ವ ಪರಾರಿಯಾದ ಆರೋಪಿ ಶಶಿ ತಲೇಖಾನ ಎನ್ನಲಾಗಿದೆ. ಆತನ ಪತ್ತೆಗೆ ಶೋಧನೆ ನಡೆಸಲಾಗುತ್ತಿದೆ ಎಂದು ತನಿಖೆ ಕೈಗೊಂಡಿರುವ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

 

ಪ್ರತ್ಯೇಕ ಪ್ರಕರಣ : ಪಟ್ಟಣದ ಎಪಿಎಂಸಿ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ 08-04-2022 ರಂದು ಓಸಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಕಾಸೀಂ ತಂದೆ ನಾಗಪ್ಪ ಕೊರವರ ಎಂಬುವ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದು, ಓಸಿ ಮಟ್ಕಾಗೆ ಬಳಸಿದ ಪೆನ್ನು, ಚೀಟಿ ಹಾಗೂ 200 ರೂಪಾಯಿ ನಗದು ಹಣ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ..!!