ಜಂಗಲ ಕಟಿಂಗಿಗೆ ಮುಂದಾದ ಜೆಸ್ಕಾಂ

ಸಂಗಮೇಶ ಮುಶಿಗೇರಿ

ಕೆಪಿ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಅಪಾಯದ ಆಹ್ವಾನಕ್ಕೆ ಕಾರಣವಾಗಿದ್ದ ವಿದ್ಯುತ್ ದೀಪದ ಕಂಬಗಳ ಸುತ್ತಲು ಆವರಿಸಿದ್ದ ಗಿಡಗಂಟೆಗಳ ಕುರಿತು ‘ಕೃಷಿ ಪ್ರಿಯ’ ವೆಬ್ ಪೋರ್ಟಲ್ 08-04-2022 ರಂದು ‘ಅಪಾಯಕ್ಕೆ ಅಹ್ವಾನಿಸುತ್ತಿವೆ ವಿದ್ಯುತ್ ಕಂಬಗಳು’ ಎಂಬ ತಲೆ ಬರಹದಲ್ಲಿ ಸುದ್ದಿ ಪ್ರಸಾರ ಮಾಡಿತ್ತು. ವರದಿಗೆ ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ದಿನಾಂಕ 09-04-2022 ರಂದು ಗಿಡಗಂಟೆಗಳ ತೆರವಿಗೆ ಕ್ರಮ ಕೈಗೊಂಡಿದ್ದಾರೆ..!

ಜಿಲ್ಲೆಯ ಕುಷ್ಟಗಿ ಪಟ್ಟಣದ ಮಾರುತಿ ವೃತ್ತ, ಕನಕದಾಸ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ವಾಲ್ಮೀಕಿ ವೃತ್ತದ ಮುಖ್ಯ ರಸ್ತೆಯ ಬದಿಯಲ್ಲಿ ಅಳವಡಿಸಿರುವ ವಿದ್ಯುತ್ ದೀಪದ ಕಂಬಗಳ ಸುತ್ತಲೂ ಗಿಡಗಂಟೆಗಳು ಆವರಿಸಿಕೊಂಡಿದ್ದವು. ವಿದ್ಯುತ್ ಅಪಾಯ ತಪ್ಪಿಸಲು ಗಿಡದ ಟೊಂಗೆಗಳ ತೆರವಿಗೆ ಜೆಸ್ಕಾಂ ಅಧಿಕಾರಿಗಳು ಸೂಚಿಸಿದ ಹಿನ್ನೆಲೆ ಜೆಸ್ಕಾಂ ಸಿಬ್ಬಂದಿ ಆನಂದ, ಖಾಸಿಮಅಲಿ ಗಡಾದ, ತಾಜುದ್ದಿನ್, ಶೇಖರಗೌಡ ಪಾಟೀಲ್, ಮಂಜುನಾಥ ಗಡಾದ ಇವರುಗಳು ಜಂಗಲ್ ಕಟ್ಟಿಂಗ್ ಮಾಡಲು ಮಂದಾದರು. ಈ ಕಾರ್ಯ ಕಂಡ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..!!