ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮುಂಬರುವ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಜರುಗುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಎಂದೆಂದಿಗೂ ಮರೆಯಲಾಗದ ಸಮ್ಮೇಳನವಾಗಲಿದೆ ಎಲ್ಲಾ ನೌಕರರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅವರು ಸೇರಿದ ನೌಕರರಿಗೆ ಮನವಿ ಮಾಡಿಕೊಂಡ ಪ್ರಸಂಗ ಜರುಗಿತು..!
ಅವರು ಜಿಲ್ಲೆಯ ಕುಷ್ಟಗಿ ಪಟ್ಟಣದ ಪಿಸಿಹೆಚ್ ಪ್ಯಾಲೇಸ್ ನಲ್ಲಿ ಜರುಗಿದ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡ ಶಂಕುಸ್ಥಾಪನೆ ಮತ್ತು ತಾಲೂಕು ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.
ಬೈಕ್ ಮೆರವಣಿಗೆ : ಕಾರ್ಯಕ್ರಮಕ್ಕೂ ಮೊದಲು ಕುಷ್ಟಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಿಂದ ಪಿ.ಸಿ.ಹೆಚ್ ಪ್ಯಾಲೇಸ್ ವರೆಗೆ ನೂರಾರು ಬೈಕ್ ಗಳೊಂದಿಗೆ ಸರಕಾರಿ ನೌಕರರು ಮೆರವಣಿಗೆವೊಂದಿಗೆ ಸಾರೋಟದ ಮೂಲಕ ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರನ್ನು ಕರೆತಂದಿದ್ದು ವಿಶೇಷವಾಗಿತ್ತು..!!