ಐಪಿಎಲ್ ಬೆಟ್ಟಿಂಗ್ : ಹನುಮನಾಳ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲು

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಐಪಿಎಲ್ (ಕ್ರಿಕೆಟ್) ಜೂಜಾಟದಲ್ಲಿ ತೊಡಗಿದ್ದ ಎನ್ನಲಾದ ಇಬ್ಬರು ಯುವಕರ ಮೇಲೆ ಹನುಮಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ‌ಮಹೇಶ (33) ಬಸನಗೌಡ (26) ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಿದ ಪೊಲೀಸರು, ವಿಚಾರಣೆ ಹಾಗೂ ಪ್ರಕರಣ ದಾಖಲಾದ ಬಳಿಕ ಕೈಬಿಟ್ಟಿದ್ದಾರೆ. ಜೂಜಾಟದಲ್ಲಿ ತೊಡಗಿದ್ದ ಇನ್ನೂ ಕೆಲ ಯುವಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

(ಪ್ರಕರಣ ದಾಖಲೆ ಸಂಖ್ಯೆ 43/2022, ಕಲಂ ನಂ 78 (1) (ಎ) (6) ನೂತನ ರಾಜ್ಯ ಪೊಲೀಸ್ ತಿದ್ದುಪಡಿ ಕಾಯ್ದೆ 2021)

ಜೂಜಾಟಕ್ಕೆ ಬಳಸಿದ್ದ ಮೊಬೈಲ್ ನಲ್ಲಿ ಸಂಗ್ರಹಗೊಂಡಿದ್ದ ದಾಖಲೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ‘ಕೃಷಿ ಪ್ರಿಯ’ ಪತ್ರಿಕೆಗೆ ಸ್ಪಷ್ಟಪಡಿಸಿವೆ..!!