ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಸಿಡಿಲಿಗೆ ರೈತನೊರ್ವ ಬಲಿಯಾಗಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಾಟಾಪೂರು ಜಮೀನೊಂದರಲ್ಲಿ ಜರುಗಿದೆ..!
ಲಕ್ಷ್ಮಣ ಶಿವಪ್ಪ ಅಂಬಿಗೇರ (35) ಮೃತ ರೈತ. ಜಮೀನಿನಲ್ಲಿ ಗಾಳಿ ಮಳೆವೊಂದಿಗೆ ಅರ್ಭಟಿಸಿದ ಸಿಡಿಲಿನ ಹೊಡೆತಕ್ಕೆ ರೈತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಮೃತ ರೈತ ಬಾಗಲಕೋಟೆ ಜಿಲ್ಲೆಯ ಚೌಡಾಪೂರು ಗ್ರಾಮದವರು ಎಂದು ತಿಳಿದುಬಂದಿದೆ. ಮೃತ ರೈತ, ಕಾಟಾಪೂರು ಗ್ರಾಪಂ ಅಧ್ಯಕ್ಷ ಮಂಜುನಾಥ ಪಾವಿಯವರ ಸಹೋದರ ಸಂಬಂಧಿಯಾಗಿದ್ದಾನೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!!