ಕೊಪ್ಪಳ ಗವಿಶ್ರೀಗಳಿಂದ ನೂತನ ರಥೋತ್ಸವಕ್ಕೆ ಚಾಲನೆ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಪಟ್ಟಲಚಿಂತಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ನೂತನವಾಗಿ ನಿರ್ಮಿಸಿದ ಮಹಾ ರಥೋತ್ಸವಕ್ಕೆ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಚಾಲನೆ ನೀಡುವ ಮೂಲಕ ಲೋಕಾರ್ಪಣೆಗೊಳಿಸಿದರು..!

ನೂತನ ರಥ ಲೋಕಾರ್ಪಣೆ ನಿಮಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಅಂಜನಿ ಪುತ್ರನಿಗೆ ತೊಟ್ಟಿಲು ಸೇವೆ ಸೇರಿದಂತೆ ಹೋಮ ಹವನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಿದವು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು, ಮಾಲಗಿತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ರಾಜೂರು, ಜಿಪಂ ಮಾಜಿ ಸದಸ್ಯರಾದ ನೇಮಣ್ಣ ಮೇಲಸಕ್ರಿ, ಸೋಮಣ್ಣ ಇಂಗಳದಾಳ ಸೇರಿದಂತೆ ವಿವಿಧ ಗಣ್ಯರು ನೂತನ ರಥೋತ್ಸವಕ್ಕೆ ಸಾಕ್ಷಿಯಾದರು..!!