ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಜಮೀನೊಂದರಲ್ಲಿ ಹಾಕಿದ ಮೂರು ಮೇವಿನ ಬಣವಿಗಳು ಸಿಡಿಲಿಗೆ ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.
ಹನುಮನಾಳದ ರೈತ ಹನುಮಗೌಡ ನಿಂಗನಗೌಡ ಗೌಡ್ರ ಎಂಬುವರಿಗೆ ಸೇರಿದ ಮೂರು ಮೇವಿನ ಬಣವಿಗಳಾಗಿವೆ. ಅಂದಾಜು ಒಂದು ಲಕ್ಷ ರೂಪಾಯಿಗಳ ಮೌಲ್ಯದ ಶೇಂಗಾ, ಜೋಳ, ಸಜ್ಹಿ ಸೇರಿದಂತೆ ಹುರಳಿ ಇತ್ಯಾದಿ ಹೊಟ್ಟು ಸಂಗ್ರಹದ ದೊಡ್ಡ ಗಾತ್ರದ ಬಣವಿಗಳು ಸಿಡಿಲಿಗೆ ಸುಟ್ಟು ಹೋಗಿವೆ. ಬಾರಿ ಮಳೆ ಸೇರಿದಂತೆ ಸಿಡಿಲು ಗುಡುಗ ಸೇರಿದ ಮಳೆ ರೈತನ ಹಾನಿಗೂ ಕೂಡಾ ಕಾರಣವಾಗಿದೆ. ವರ್ಷವಿಡೀ ಸಂಗ್ರಹಿಸಿದ ಮೇವು ಹಾಗೂ ಹೊಟ್ಟು ಕಳೆದಕೊಂಡ ರೈತನ ಆಕ್ರಂದನ ಮುಗಿಲು ಮುಟ್ಟಿತ್ತು. ಜಾನುವಾರುಗಳ ಜೀವನಕ್ಕಾಗಿ ಸಂಗ್ರಹಿಸಿದ ಎಲ್ಲವನ್ನು ಕಳೆದಕೊಂಡ ರೈತ ಕುಟುಂಬ ಸೂಕ್ತ ಪರಿಹಾರಕ್ಕಾಗಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.