ಹನುಮನಾಳದಲ್ಲಿ ಗ್ರಾಮ ದೇವತೆ ವೈಭವ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ಗ್ರಾಮ ದೇವತೆಯ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಮೂರು ವರ್ಷಗಳಿಗೊಮ್ಮೆ ಜರುಗುವ ದೇವಿ ಜಾತ್ರೆಗೆ ಇಡೀ ಗ್ರಾಮ ಮದುವನಗಿತ್ತಿಯಂತೆ ಶೃಂಗಾರಗೊಳಿಸಲಾಗಿದೆ. ಶತಮಾನಗಳ ಇತಿಹಾಸ ಹೊಂದಿರುವ ಜಾತ್ರೆಗೆ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರುವುದು ವಿಶೇಷ. ಸಂಪ್ರದಾಯದಂತೆ ಪ್ರತಿ ಮನೆಗಳಿಂದ ಪೂಜಾ ವಿಧಾನಗಳು ಜರುಗುತ್ತವೆ. ಜಾತ್ರೆ ಹಿನ್ನಲೆಯಲ್ಲಿ ದೇವಿಗೆ ವಿವಿಧ ತರಹದ ನೈವೇದ್ಯ ಹಮ್ಮಿಕೊಳ್ಳಲಾಗುವುದು. ಕಳೆದ ಒಂದು ತಿಂಗಳಿಂದ ವಾರದ ಎರಡು ದಿನಗಳ ಕಾಲ (ಮಂಗಳವಾರ ಮತ್ತು ಶುಕ್ರವಾರ) ಗ್ರಾಮದ ಎಲ್ಲಾ ದೇವರಿಗೆ ಮಡಿ ನೀರು ಅಭಿಷೇಕ ಮೂಲಕ ಕೊನೆಯ ದಿನ ಜಾತ್ರೆಯ ವಿವಿಧ ಧಾರ್ಮಿಕ ಕಾರ್ಯಗಳು ಯಶಸ್ವಿಯಾಗಿ ಸಾಗಿಬಂದಿವೆ. ಗ್ರಾಮಸ್ಥರು ತಮ್ಮ ಇಷ್ಟಾರ್ಥಗಳನ್ನು ಪಡೆದುಕೊಳ್ಳಲಿದ್ದಾರೆ. ಜಾತ್ರೆ ಬಳಿಕ ರೈತರು, ಹದಗೊಳಿಸಿದ ಜಮೀನುಗಳಿಗೆ ಮೊದಲ (ಬೀಜ) ಬಿತ್ತನೆಗೆ ಮುಂದಾಗುವುದು ನಡೆದು ಬಂದಿರುವ ಸಂಪ್ರದಾಯ. ನೂರಾರು ಜನ ಭಕ್ತರು ದೀಡ ನಮಸ್ಕಾರ ಭಕ್ತಿ ಸೇವೆ ಸಮರ್ಪಿಸಿದ್ದು ವರ್ಷದ ವಿಶೇಷ. ಈಗಾಗಲೇ ಮೊದಲ ‘ಅಶ್ವಿನಿ’ ಮಳೆಯ ಅರ್ಭಟ ಜೊರಾಗಿದೆ. 2022 ರ ಮುಂಗಾರು ರೈತರಿಗೆ ಹರ್ಷದಾಯಕವಾಗಲಿ ಎಂಬುದು ‘ಕೃಷಿ ಪ್ರಿಯ’ ಪತ್ರಿಕೆಯ ಆಶಯ.