ಸಿಡಿಲಿಗೆ ಆಕಳು ಬಲಿ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದ ಹೊರವಲಯದಲ್ಲಿ ಕಟ್ಟಿದ ಆಕಳುಗೆ ಸಿಡಿಲು ಬಡಿದು ಮೃತಪಟ್ಟ ಘಟನೆ (ದಿನಾಂಕ 22-04-2022 ರಂದು ಸಾಯಂಕಾಲ) ನಡೆದಿದೆ..!

ತಾಲೂಕಿನ ಕೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡೇಕೊಪ್ಪ ಗ್ರಾಮದ ರೈತ ಬಸನಗೌಡ ಸಂಗನಗೌಡ ಪಾಟೀಲ್ ಎಂಬುವನಿಗೆ ಸೇರಿದ ಹಸು ಎನ್ನಲಾಗಿದೆ. ಗ್ರಾಮದ ಹೊರವಲಯದ ಮರವೊಂದಕ್ಕೆ ಆಕಳನ್ನು ಕಟ್ಟಲಾಗಿತ್ತು. ಕಡೇಕೊಪ್ಪ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಆರಂಭವಾದ ಜಿಟಿ ಜಿಟಿ ಮಳೆ, ಗಾಳಿ ಗುಡುಗು ಸಿಡಿಲು ಉಂಟಾಗಿತ್ತು. ಆ ಸಮಯದಲ್ಲಿ ಆಕಳುಗೆ ಸಿಡಿಲು ಬಡಿದು ಹಸುನೀಗಿದೆ ಎಂದು ರೈತ ಸ್ಪಷ್ಟಪಡಿಸಿದ್ದಾರೆ. ಬೆಲೆ ಬಾಳುವ ಆಕಳು ಕಳೆದುಕೊಂಡು ಕಂಗಾಲಾಗಿರುವ ರೈತನಿಗೆ, ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ರೈತ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.