ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬೆಂಗಳೂರು (ಕೊಪ್ಪಳ) : ರಾಜ್ಯದ ಮೊದಲ ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆಗೆ 100 ಎಕರೆ ಜಮೀನನ್ನು ಯಲಹಂಕದ ಬಳಿ ಗುರುತಿಸಲಾಗಿದೆ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ..!
ಅವರು ಮಲ್ಲೇಶ್ವರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಬಹು ದಿನಗಳ ಬೇಡಿಕೆಯಾಗಿರುವ ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರಕಾರ 100 ಎಕರೆ ಜಮೀನನ್ನು ಯಲಹಂಕದ ಬಳಿ ಗುರುತಿಸಲಾಗಿದೆ. 65 ಎಕರೆ ಜಮೀನನ್ನು ಸರಕಾರ ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ಬಾಕಿ 35 ಎಕರೆ ಜಮೀನು ವಶಪಡಿಸಿಕೊಳ್ಳುವ ಕಾರ್ಯವನ್ನು ಜಿಲ್ಲಾಡಳಿತ ನಡೆಸಿದೆ. ಎಲ್ಲಾ ಕಾರ್ಯಗಳು ಜರೂರು ಪೂರ್ಣಗೊಳಿಸುವುದಾಗಿ ಕ್ರೀಡಾ ಸಚಿವರು ಭರವಸೆವ್ಯಕ್ತಪಡಿಸಿದರು. ರಾಜ್ಯದ ಕ್ರೀಡಾಪಟುಗಳ ಮತ್ತು ಬಹುತೇಕ ಕ್ರೀಡಾಸಕ್ತರ ಕ್ರೀಡಾ ವಿವಿ ಸ್ಥಾಪನೆಯ ಆಶಯ ಈಡೇರಿಸಿದಂತಾಗಿದೆ.
‘ಕೃಷಿ ಪ್ರಿಯ’ ವರದಿ ಸ್ಮರಣೆ : 01-03-2022 ರಂದು ಕೃಷಿ ಪ್ರಿಯ ಪತ್ರಿಕೆಯು ‘ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕು’ ಎಂಬ ತಲೆ ಬರಹದಲ್ಲಿ ವಿಶೇಷ ವರದಿಯೊಂದನ್ನು ಪ್ರಸಾರದ ಮೂಲಕ ಬಜೆಟ್ ಮುನ್ನ ರಾಜ್ಯ ಸರಕಾರದ ಗಮನ ಸೆಳೆದಿದ್ದನನ್ನು ಇಲ್ಲಿ ಸ್ಮರಿಸಬಹುದಾಗಿದೆ. ರಾಜ್ಯದ ಮೊದಲ ಹಾಗೂ ದೇಶದ ಮೂರನೇ ಕ್ರೀಡಾ ವಿಶ್ವ ವಿದ್ಯಾಲಯ ರಾಜಧಾನಿ ಬೆಂಗಳೂರಿನ ಹೃದಯ ಭಾಗವಾದ ಯಲಹಂಕ ಬಳಿ ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ಸಂಗತಿ ಅಲ್ಲವೇ..!?