ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ರಾತ್ರಿ ವೇಳೆ ಆರ್ಭಟಿಸಿದ ಗುಡುಗು ಮಳೆ ಬಿರುಗಾಳಿಗೆ ವಿದ್ಯುತ್ ತಂತಿ ಹರಿದುಬಿದ್ದು, ಎಮ್ಮೆವೊಂದು ಬಲಿಯಾದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ದಿನಾಂಕ 28-04-2022 ರಂದು ನಡೆದಿದೆ..!
ಪಟ್ಟಣದ ರೈತ ವಿರೂಪಾಕ್ಷಯ್ಯ ಹಿರೇಮಠ ಎಂಬುವರಿಗೆ ಸೇರಿದ ಎಮ್ಮೆ ಎನ್ನಲಾಗಿದೆ. ಸಂದೀಪ ನಗರ ಆಶ್ರಯ ಕಾಲೋನಿ ಬಳಿಯ ಈದ್ಗಾ ಮೈದಾನದ ಹಿಂಭಾಗದಲ್ಲಿ ರೈತನ ಜಮೀನಿದೆ. ಅಲ್ಲಿ ಎಮ್ಮೆಗಳ ಕೊಟ್ಟಿಗೆ ಇದೆ. ಜಮೀನಿಗೆ ಹೊಂದಿಕೊಂಡು ವಿದ್ಯುತ್ ಕಂಬಗಳಿದ್ದು, ಸಂಪರ್ಕ ಹೊಂದಿರುವ ವಿದ್ಯುತ್ ತಂತಿ ಹರಿದು ಎಮ್ಮೆಯ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಬೆಲೆ ಬಾಳುವ ಎಮ್ಮೆ ಕಳೆದುಕೊಂಡ ರೈತ ಹಾಗೂ ಅಲ್ಲಿ ನೆರೆದಿದ್ದ ಸಾರ್ವಜನಿಕರು ಪರಿಹಾಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದರು.
ಟೆಂಗಿನ ಗಿಡಕ್ಕೆ ಬೆಂಕಿ : ಕುಷ್ಟಗಿ ತಾಲೂಕಿನ ಹನುಮಸಾಗರ ಪಟ್ಟಣದ ಶಂಕರ ಪರಪ್ಪ ಹುಲಮನಿ ಎಂಬುವರ ಮನೆ ಮುಂದಿನ ಟೆಂಗಿನ ಗಿಡವೊಂದಕ್ಕೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹತ್ತಿಕೊಂಡಿರುವ ಘಟನೆ ಜರುಗಿದೆ.