ಕುಷ್ಟಗಿಯಲ್ಲಿ ‘ಲೀಕ್ ಔಟ್’ ನಾಟಕ ಪ್ರದರ್ಶನ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಬಿಗ್ ಬಾಸ್ ಸ್ಪರ್ಧಾಳು ಚಲನಚಿತ್ರ, ಕಿರುತೆರೆ ನಟಿ ಅಕ್ಷತಾ ಪಾಂಡವಪುರ ಅವರ ನಿರ್ದೇಶನ ಮತ್ತು ನಟನೆಯ ದಿ ಚಾನಲ್ ಥಿಯೇಟರ್, ಪಾಂಡವಪುರ ‘ಲೀಕ್ ಔಟ್’ ಎಂಬ ಕಥನ ನಾಟಕ ಜಿಲ್ಲೆಯ ಕುಷ್ಟಗಿ ಪಟ್ಟಣದ ಬಸವ ಭವನದಲ್ಲಿ 29-05-2022 ರಂದು ಸಂಜೆ 5:30ಕ್ಕೆ ಪ್ರದರ್ಶನಗೊಳ್ಳಲಿದೆ..!

ಸಮೃದ್ಧಿ ವಿವಿಧೋದ್ದೇಶಗಳ ಅಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಇನ್ನರ್ ವ್ಹಿಲ್ ಕ್ಲಬ್ ಕುಷ್ಟಗಿ ಇವರ ಸಂಯುಕ್ತ ಆಶ್ರಯದಲ್ಲಿ ನಾಟಕ ಪ್ರದರ್ಶನ ಕಾಣಲಿದೆ.

ಪುರಸಭೆ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್, ಬಿಜೆಪಿ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ. ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಾಟಕ ಪ್ರದರ್ಶನ ಯಶಸ್ವಿಗೊಳಿಸಬೇಕೆಂದು ಸಮೃದ್ಧಿ ಸಂಸ್ಥೆ ಕಾರ್ಯದರ್ಶಿ ನಬಿಸಾಬ ಕುಷ್ಟಗಿ ತಿಳಿಸಿದ್ದಾರೆ..!!