ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮ ಪಂಚಾಯತಿಗೆ ನೂತನವಾಗಿ ಅಧ್ಯಕ್ಷೆಯಾಗಿ ಶಾಂತಮ್ಮ ಲೆಂಕಪ್ಪ ಸಾಂತಗೇರಿ ಆಯ್ಕೆಯಾಗಿದ್ದಾರೆ..!
ಅಧ್ಯಕ್ಷ ಸ್ಥಾನವು ‘ಸಾಮಾನ್ಯ’ ಎಂಬ ಮೀಸಲಾತಿಗೆ 30 ತಿಂಗಳ ಅವದಿಗೆ ನಿಗದಿಯಾಗಿತ್ತು.ಆದರೆ, ಕಳೆದ 15 ತಿಂಗಳ ಅವದಿಗೆ ಎರಡನೇ ವಾರ್ಡಿನಿಂದ ಸಾಮಾನ್ಯ ಮೀಸಲಾತಿಗೆ ಸ್ಪರ್ಧಿಸಿ ಆಯ್ಕೆಯಾಗಿದ್ದ ಸಂಗಪ್ಪ ಯಲ್ಲಪ್ಪ ಹುಲ್ಲೂರು ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಸದಸ್ಯರ ಆಂತರಿಕ ಒಳ ಒಪ್ಪಂದದ ಹಿನ್ನೆಲೆಯಲ್ಲಿ ಕಳೆದ ಎಪ್ರಿಲ್ 20 ರಂದು ಅಧ್ಯಕ್ಷ ಸ್ಥಾನಕ್ಕೆ ಸಂಗಪ್ಪ ಹುಲ್ಲೂರು ರಾಜೀನಾಮೆ ಸಲ್ಲಿಸಿದ್ದರು. ತೆರವಾದ ಸ್ಥಾನಕ್ಕೆ ಇಂದು (ದಿನಾಂಕ 25-05-2022) ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಒಂದನೇ ವಾರ್ಡಿನಿಂದ ಪರಿಶಿಷ್ಟ ವರ್ಗ (ಮಹಿಳೆ) ಮೀಸಲಾತಿಯಲ್ಲಿ ಚುನಾಯಿತರಾದ ಶಾಂತಮ್ಮ ಲೆಂಕಪ್ಪ ಸಾಂತಗೇರಿ ಆಯ್ಕೆಯಾಗಿದ್ದಾರೆ ಎಂದು ತಹಸೀಲ್ದಾರ ಹಾಗೂ ಚುನಾವಣಾ ಅಧಿಕಾರಿ ಎಂ.ಸಿದ್ಧೇಶ ಆಯ್ಕೆ ಘೋಷಿಸಿದರು. ಆಯ್ಕೆ ಬಯಸಿ ಕೊನೆ ಘಳಿಗೆಯಲ್ಲಿ ಸದಸ್ಯ ಶರಣಪ್ಪ ಸಿದ್ದಪ್ಪ ಕುಂಬಾರ (ನಿಡಶೇಸಿ) ನಾಮಪತ್ರ ಸಲ್ಲಿಸಿದ್ದರು. ಕಳೆದ ಒಂದು ತಿಂಗಳಿನಿಂದ ಸದಸ್ಯ ಸಂತೋಷ ಕಂಚೇರಿ ಅವರ ಹೆಸರು ಬಿಜೆಪಿ ವಲಯದಲ್ಲಿ ಸಾಕಷ್ಟು ಕೇಳಿ ಬಂದಿತಿತ್ತು. ರಾಜಕೀಯ ಮೇಲಾಟಗಳಿಗೆ ಸಂತೋಷ ಕಂಚೇರ ಅವರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿ ಹೋಗಲು ಕಾರಣ ಎಂಬ ಮಾತುಗಳು ಕೂಡಾ ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.
ಅಭಿನಂದನೆಗಳ ಮಹಾಪೂರ : ತಾಪಂ ಮಾಜಿ ಸದಸ್ಯ ಅಂದಪ್ಪ ತಳವಾರ, ಮಾಜಿ ಉಪಾಧ್ಯಕ್ಷ ಸಿದ್ದು ರೊಟ್ಟಿ, ಮುಖಂಡರಾದ ವೀರಣ್ಣ ಗಜೇಂದ್ರಗಡ, ಯಮನೂರಪ್ಪ ಭಜಂತ್ರಿ, ನಿಂಗಪ್ಪ ಕುರುಮನಾಳ, ರೋಹಿತ ಮಲ್ಲಾಡದ, ಪ್ರವೀಣ ನಂದಿಹಾಳ, ದುರಗಪ್ಪ ಭಜಂತ್ರಿ, ಶರಣಪ್ಪ ಬಸಪ್ಪ ಕುಂಬಾರ, ಗುರುಪಾದಗೌಡ ಗೌಡ್ರ, ಮುತ್ತನಗೌಡ ಗೌಡ್ರ, ಪಿಡಿಓ ಪ್ರಶಾಂತ ಹಿರೇಮಠ, ಕಾರ್ಯದರ್ಶಿ ಶಶಿರೇಖಾ ಹಿರೇಮಠ, ಮಂಜುನಾಥ ಕೆಂಬಾವಿಮಠ, ಶರಣಪ್ಪ ಕುರುಮನಾಳ, ಶರಣಪ್ಪ ಪೂಜಾರ, ಶರಣಪ್ಪ ಕೆಂಚಪ್ಪನವರ ಸೇರಿದಂತೆ ಸದಸ್ಯರು ಮುಖಂಡರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಅಭಿನಂದಿಸಿದ್ದಾರೆ..!!