ವಿಜೃಂಭಣೆಯಿಂದ ಜರುಗಿದ ಶ್ರೀ ಹುಲಿಗೇಮ್ಮದೇವಿ ಮಹಾ ರಥೋತ್ಸವ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಉತ್ತರ ಕರ್ನಾಟಕದ ಶಕ್ತಿ ದೇವತೆ ಎಂತಲೇ ಸುಪ್ರಸಿದ್ಧವಾದ ಹುಲಿಗಿಯ (ಮುನಿರಾಬಾದ್) ಶ್ರೀ ಹುಲಿಗೇಮ್ಮದೇವಿ ಜಾತ್ರೆಯ ಮಹಾ ರಥೋತ್ಸವ ಇಂದು (ದಿನಾಂಕ 24-05-2022) ವಿಜೃಂಭಣೆಯಿಂದ ಜರುಗಿತು..!

ಕಳೆದ ಎರಡು ವರ್ಷಗಳ ಕಾಲ ಕೊರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಜಾತ್ರೆ ನಡೆದಿದ್ದಿಲ್ಲ. ಈ ವರ್ಷ ಜನ ಸಾಗರದ ಮಧ್ಯೆ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು. ರಾಜ್ಯ ಸೇರಿದಂತೆ ಆಂದ್ರಪ್ರದೇಶ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತ ಸಮೂಹ ಆಗಮಿಸಿದ್ದು ವಿಶೇಷವಾಗಿತ್ತು. ಕಳೆದ ಎರಡು ದಿನಗಳಿಂದ ಶ್ರೀ ಹುಲಿಗೇಮ್ಮದೇವಿ ಮೂರ್ತಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದವು. ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಜರುಗಿದ ಮಹಾ ರಥೋತ್ಸವಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕೆಡಿಪಿ ಸದಸ್ಯ ಅಮರೇಶ ಕರಡಿ ಸೇರಿದಂತೆ ಟ್ರಸ್ಟ್ ನ ಸದಸ್ಯರು, ಮುಜರಾಯಿ ಇಲಾಖೆ ಹಿರಿಯ ಅಧಿಕಾರಿಗಳು ಕಂದಾಯ ಇಲಾಖೆ ಸಿಬ್ಬಂದಿ ವರ್ಗ ಸಾಕ್ಷಿಯಾದರು. ಪೊಲೀಸ್ ಸಿಬ್ಬಂದಿ ಸೂಕ್ತ ಬಂದೊಬಸ್ತ್ ಒದಗಿಸಲಾಗಿತ್ತು..!!