ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ ತಮ್ಮಂದಿರ ಜಗಳದಲ್ಲಿ ಅಣ್ಣನು ತಮ್ಮನನ್ನು ಗುಂಡಿಕ್ಕಿ ಕೊಂದ ಘಟನೆ ತಾಲೂಕಿನ ಕವಲೂರು ಗ್ರಾಮದ ಜಮೀನಿನೊಂದರಲ್ಲಿ ಜರುಗಿದೆ..!
ವಿನಾಯಕ ದೇಸಾಯಿ (38) ಗುಂಡಿಗೆ ಬಲಿಯಾದ ನತದೃಷ್ಟ. ಇನ್ನೋರ್ವ ಸಹೋದರ ಯೋಗಿಶ ದೇಸಾಯಿಗೆ ಬಲವಾದ ಗಾಯವಾಗಿದೆ. ರಾಘವೇಂದ್ರ ದೇಸಾಯಿ ತನ್ನ ಬಳಿಯಿದ್ದ ಪರವಾನಿಗೆ ಪಡೆದ ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಬಹುದಿನಗಳಿಂದ ಸಹೋದರರ ಮಧ್ಯೆ ಜಮೀನು ವ್ಯಾಜ್ಯ ಇತ್ತು ಎಂದು ಹೇಳಲಾಗುತ್ತಿದೆ. ಸಾವಿಗೆ ಜಮೀನಿನ ವ್ಯಾಜ್ಯ ಕಾರಣವಾಗಿರುವ ಕುರಿತು ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವಿತು ಕುಳಿತುಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ..!!