ಹನುಮನಾಳದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ದೇಶಕ್ಕಾಗಿಯೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಗಡಿಯಲ್ಲಿ ಹಗಲಿರುಳು ಸೇವೆಗೈದು, ನಿವೃತ್ತಿಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಭಾರತ ಮಾತೆಯ ಹೆಮ್ಮೆಯ (ಪುತ್ರರರಿಗೆ) ಸೈನಿಕರಿಗೆ ಎಸ್ಸೆಸ್ಸೆಲ್ಸಿ 2000/2001 ನೇ ಸಾಲಿನ ಗೆಳೆಯರ ಬಳಗವು ಆತ್ಮೀಯವಾಗಿ ಸನ್ಮಾನಿಸಿ ಸತ್ಕರಿಸಿತು..!

ಕುಷ್ಟಗಿ ತಾಲೂಕಿನ ಬಾದಿಮನಾಳ ಗ್ರಾಮದ ನಿವೃತ್ತ ಸೈನಿಕರಾದ ಹುಚ್ಚೀರಪ್ಪ ಶಿರೂರು ಹಾಗೂ ಶಾಡಲಗೇರಿ ಗ್ರಾಮದ ಹುಸೇನ್ ಸಾಬ್ ನೈನಾಪೂರ ಸನ್ಮಾನಿತಗೊಂಡ ನಿವೃತ್ತ ಸೈನಿಕರು. ಈ ಇಬ್ಬರು ಸೈನಿಕರು ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  2000/2001 ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ  ಪಾಸಾಗಿರುವಂತವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಅನಿಸುತ್ತಿದೆ. ಇಂತಹ ವಿಶಿಷ್ಟ ಕಾರ್ಯಕ್ರಮ ಹನುಮನಾಳದ ಪ್ರವಾಸಿ ಮಂದಿರದಲ್ಲಿ ಜರುಗಿತು. ಈ ಇಬ್ಬರು ನಿವೃತ್ತ ಸೈನಿಕರು ತಮ್ಮ 18 ವರ್ಷಗಳ ದೇಶ ಸೇವೆಯ ಕುರಿತು ಹೆಮ್ಮೆವ್ಯಕ್ತಪಡಿಸಿದರು. ಇನ್ನೂ ಹೆಚ್ಚು ಹೆಚ್ಚು ಯುವಕರು ಗಡಿ ಸೇವೆ ಸಲ್ಲಿಸಲು ಮುಂದೆ ಬರುವಂತೆ ಕೂಡಾ ಸಲಹೆ ನೀಡಿದರು. 22 ವರ್ಷಗಳ ಬಳಿಕ ಸುಮಾರು 45 ಕ್ಕೂ ಅಧಿಕ ಸಹಪಾಠಿಗಳು ಒಂದುಕಡೆ ಸೇರಿದ್ದು ವಿಶೇಷವಾಗಿತ್ತು. ಬಾಲ್ಯದ ನೆನಪುಗಳು ಮರಳಿ ಬಂದು ಹೋದವು ಎಂದು ಹನುಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕಳಕಪ್ಪ ಉಣಚಗೇರಿ ಸ್ಮರಿಸಿಕೊಂಡರು. 

ಹನುಮನಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ  ಸಂಗಪ್ಪ ಹುಲ್ಲೂರು, ದೈಹಿಕ ಶಿಕ್ಷಣ ಶಿಕ್ಷಕ ಮೈಬೂಬ್ ಸಾಬ್ ಮೂಲಿಮನಿ, ಯುವ ಮುಖಂಡ ವಿಠ್ಠಲ ಬಿಸೆ, ಆರೋಗ್ಯ ಇಲಾಖೆಯ ಕಳಕಪ್ಪ ಉಣಚಗೇರಿ, ಕೊಡತಗೇರಿಯ ಶಾಂತಪ್ಪ ದ್ಯಾಮಣ್ಣವರ, ಮಲ್ಲಿಕಾರ್ಜುನ ಕುರಟ್ಟಿ, ಗುಡ್ಡದ ದೇವಲಾಪೂರ ಗ್ರಾಮದ ರಾಮಕೃಷ್ಣ ಮೇಟಿಕಲ್, ಮಿಟ್ಟಲಕೋಡ ಗ್ರಾಮದ ಹನುಮಂತ ವತ್ತಿ, ಮಂಜುನಾಥ ಹೂಗಾರ, ಪಟ್ಟಲಚಿಂತಿಯ ವಿಜಯ್ ಇಂಗಳದಾಳ ಸೇರಿದಂತೆ ಇನ್ನಿತರರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..!!