ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ವರ್ಗಾವಣೆ ಭಾಗ್ಯ

ಶರಣಪ್ಪಕುಂಬಾರ 

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ವರ್ಗಾವಣೆ ಪರ್ವ ಆರಂಭವಾಗಿದೆ. ತಾಂತ್ರಿಕ ಸೇರಿದಂತೆ ತಾಂತ್ರಿಕೇತರ ಒಟ್ಟು 44 ಜನ ಸಿಬ್ಬಂದಿಯನ್ನು ವಿವಿಧ ಸ್ಥಳಗಳಿಗೆ ನಿಯೋಜಿಸಿದ ಇಲಾಖೆಯ ವರ್ಗಾವಣೆ ಆದೇಶ ಹೊರ ಬಿದ್ದಿದೆ..!

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಓರ್ವ ಉಪನಿರ್ದೇಶಕ ಸೇರಿದಂತೆ 14 ಜನ ಹಿರಿಯ ಭೂವಿಜ್ಞಾನಿಗಳು, 10 ಭೂವಿಜ್ಞಾನಿಗಳು, ಇಬ್ಬರು ಸಹಾಯಕ ಎಂಜಿನಿಯರ್, ಓರ್ವ ಕಿರಿಯ ಎಂಜಿನಿಯರ್, ನಾಲ್ಕು ಜನ ಅಧೀಕ್ಷಕರು, 8 ಜನ ಪ್ರಥಮ ದರ್ಜೆ ಸಹಾಯಕರು ಹಾಗೂ ನಾಲ್ಕು ಜನ ದ್ವೀತಿಯ ದರ್ಜೆ ಸಹಾಯಕರನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ (ಗಣಿ-2) ಸುಮ ಎಸ್, ಅವರು ದಿನಾಂಕ 15-06-2022 ರಂದು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕೊಪ್ಪಳಕ್ಕೆ ಹಿರಿಯ ಭೂವಿಜ್ಞಾನಿಯಾಗಿ ದಿಲೀಪ್ ಕುಮಾರ ಬಿ.ಜಿ ಅವರು ವರ್ಗಾವಣೆಯಾಗಿದ್ದಾರೆ. ಇಲ್ಲಿಯವರೆಗೂ ಆಡಳಿತದಲ್ಲಿದ್ದ ಹಿರಿಯ ಭೂವಿಜ್ಞಾನಿ ಮುತ್ತಪ್ಪ ಪಿ, ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಳಿಸಲಾಗಿದೆ. ಅಲ್ಲದೆ, ಸನಿತ್ ಸಿ, ಹಾಗೂ ಮಹೇಶ ಡಿ.ಎಸ್ ಎಂಬ ಭೂವಿಜ್ಞಾನಿಗಳನ್ನು ಕೂಡಾ ಕೊಪ್ಪಳ ಜಿಲ್ಲೆಯ ಹಿರಿಯ ಭೂವಿಜ್ಞಾನಿಗಳ ಕಚೇರಿಗೆ ಹೆಚ್ಚುವರಿಯಾಗಿ ಸ್ಥಳ ನಿಯೋಜನೆಗೊಳಿಸಲಾಗಿದೆ.