ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಹುಚ್ಚುನಾಯಿ ಕಡಿತಕ್ಕೆ ಏಳು ಜನ ಗಾಯಗೊಂಡ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ದಿನಾಂಕ 15-06-2022 ರಂದು ಬೆಳ್ಳಂ ಬೆಳಿಗ್ಗೆ ನಡೆದಿದೆ..!
ಪಟ್ಟಣದ ವಿದ್ಯಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳ ಮೇಲೆ ಹುಚ್ಚುನಾಯಿ ದಾಳಿ ಮಾಡಿ ಕಚ್ಚಿಹಾಕಿದೆ. ಇಬ್ಬರು ಯುವಕರು ಸೇರಿದಂತೆ ಏಳು ಜನರನ್ನು ಕಚ್ಚಿದೆ. ಒಬ್ಬರ ಕಿರು ಬೆರೆಳು, ಮತ್ತೊಬ್ಬರ ಕಾಲು, ಇನ್ನೊರ್ವರ ಹೊಟ್ಟೆಯ ಭಾಗ ಕಚ್ಚಿದೆ. ದಾಳಿಗೊಳಗಾದವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀವ್ರ ಗಾಯಗೊಂಡಿರುವ ಒಬ್ಬ ವೃದ್ದನನ್ನು ಹೇಚ್ಚಿನ ಚಿಕಿತ್ಸೆಗೆ ಬೇರೆಡೆ ಕಳುಹಿಸಿಕೊಡಲಾಗಿದೆ. ಈ ಕುರಿತು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ತಿಳಿಸಿದ್ದಾರೆ. ಬೆಳ್ಳಂಬೆಳಿಗ್ಗೆ ಹುಚ್ಚುನಾಯಿ ದಾಳಿಯಿಂದಾಗಿ ಭೀತಿಗೆ ಒಳಗಾಗಿರುವ ಪಟ್ಟಣದ ಜನತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆದಷ್ಟು ಬೇಗನೆ ಹುಚ್ಚುನಾಯಿ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ..!!