ಕೊರೋನಾ ನಾಲ್ಕನೇ ಅಲೆಯಲ್ಲಿ ಜಾಗೃತಿ ಮುಖ್ಯ : ಸುರೇಂದ್ರ ಕಾಂಬಳೆ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜನ ಆಂದೋಲನ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು , ನಾಲ್ಕನೇ ಕೊರೋನಾ ಅಲೆಯಲ್ಲಿ ಜಾಗೃತಿಯಿಂದ ಹೋರಾಡಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಸಲಹೆ ನೀಡಿದರು..!

ಜಿಲ್ಲೆಯ ಕುಷ್ಟಗಿ ಪಟ್ಟಣದ ಪದವಿ ಕಾಲೇಜ್ ಆಡಿಟೋರಿಯಂ ಹಾಲ್ ನಲ್ಲಿ ಜರುಗಿದ ಶೇ.ನೂರರಷ್ಟು ವಾಕ್ಸಿನೇಷನ್ ಕಾರ್ಯ ಸಾಧನೆಯ ಸಮಾಲೋಚನೆ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು..!

ಪ್ರಭಾರಿ ತಾಲೂಕಾ ಆರೋಗ್ಯಾಧಿಕಾರಿ ಸೋಮಶೇಖರ ಮೇಟಿ ಕೊರೋನಾ ವ್ಯಾಕ್ಸಿನೇಷನ್‌ ಮಹತ್ವ ಹಾಗೂ ರೋಗದ ಗುಣ ಲಕ್ಷಣಗಳು ಮತ್ತು ಕೊರೋನಾ ನಾಲ್ಕನೇ ಅಲೆಯ ಕುರಿತು ಮನವರಿಕೆ ಮಾಡಿಕೊಟ್ಟರು.

ಇಸಿಓ ದಾವಲಸಾಬ್ ಸಭೆಯಲ್ಲಿ ವಾಕ್ಸಿನೇಷನ್ ಪ್ರಗತಿ ಮಾಹಿತಿ, ದಾಖಲಾತಿ ಆಂದೋಲನ, ಕಲಿಕಾ ಚೇತರಿಕೆ, ಮಳೆ ಬಿಲ್ಲು ಅನುಷ್ಠಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಿ.ಆರ್.ಸಿ ಸಮನ್ವಯ ಅಧಿಕಾರಿ ಶಾರದಾ ಅಣ್ಣಿಗೇರಿ ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗುವಂತೆ ಸಲಹೆ ನೀಡಿದರು. ಅಕ್ಷರ ದಾಸೋಹ ತಾಲೂಕಾ ಅಧಿಕಾರಿ ಶರಣಪ್ಪ , ಸರಕಾರಿ, ಅನುದಾನಿತ, ಅನುದಾನಿತ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮುಖ್ಯಗುರುಗಳು, ಸಿ.ಆರ್.ಪಿ ಮತ್ತು ಬಿ.ಆರ್.ಪಿ ಸಿಬ್ಬಂದಿ ವರ್ಗ ಹಾಜರಿದ್ದರು. ಬಿ.ಆರ್.ಪಿ ಶರಣಪ್ಪ ತೆಮ್ಮಿನಾಳ ಕಾರ್ಯಕ್ರಮ ನಿರೂಪಿಸಿದರು.