ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹತ್ತಿ ಬೆಳೆ ‘ಅನ್ ಕ್ರಾಸ್’ ಆಗಿದೆ ಎಂದು ಗುರುತಿಸಿ ಕಿತ್ತು ಹಾಕುವ ‘ಕೂಲಿ’ಯನ್ನು ರೈತರೇ ಪಾವತಿಸಬೇಕು ಇದು ನ್ಯಾಯವೇ..!?
ಇದು ಯಾವ ಸೀಮೆ ನ್ಯಾಯ ನೀತಿ ನೋಡ್ರಿ… ಹಗಲು ರಾತ್ರಿ ದುಡಿದು, ಸಾವಿರಾರು ರೂಪಾಯಿಗಳಷ್ಟು ಖರ್ಚು ಮಾಡಿ, ಬೆಳೆದ ಹತ್ತಿ ಫಸಲು ಕೈಗೆ ಬಂದಿರುವ ಸಮಯದಲ್ಲಿ ಬೀಜ ನೀಡಿದ ಖಾಸಗಿ ಬೀಜ ಉತ್ಪಾದನಾ ಕಂಪನಿಯವರು ಅನ್ ಕ್ರಾಸ್ ಬೆಳೆ ಎಂದು ಗುರುತಿಸಿ, ಬೆಳೆದಿದ್ದ ಅರ್ಧದಷ್ಟು ಹತ್ತಿ ಬೆಳೆಯನ್ನು ಕಿತ್ತು ಹಾಕುವುದು ಒಂದು ಕಡೆ ಅನ್ಯಾಯವಾದರೇ.. ಒಂದು ಪ್ಲಾಟಿನಷ್ಟು ಅನ್ ಕ್ರಾಸ್ (ಅಂದರೆ ಅಂದಾಜು ಎಕರೆ ಪ್ರದೇಶಕ್ಕೆ) ಹತ್ತಿ ಬೆಳೆ ಕಿತ್ತು ಹಾಕಿದ ಕೂಲಿ ಎಂದು 2 ಸಾವಿರ ರೂಪಾಯಿಗಳನ್ನು ರೈತರು ತೆತ್ತಬೇಕು ಇದು ಎರಡನೇ ಅನ್ಯಾಯ… ಇದು ಯಾವ ನ್ಯಾಯ. ಅಲ್ಲದೆ, ರೈತರ ಬಳಿ ಹಣ ಇಲ್ಲವಾದ ಪಕ್ಷದಲ್ಲಿ ಕೊನೆಯದಾಗಿ ಬೀಜ ಮಾರಾಟದ ಬಳಿಕ ಅನ್ ಕ್ರಾಸ್ ಕಿತ್ತು ಹಾಕಿದ 2 ಸಾವಿರ ರೂಪಾಯಿಗಳ ಕೂಲಿ ಹಣಕ್ಕೆ 2 ರೂಪಾಯಿ ಬಡ್ಡಿ ದರದಲ್ಲಿ ಹಣ ಕಟಾವು ಮಾಡಿಕೊಳ್ಳುವ ಸುಲಿಗೆ ಪದ್ಧತಿಗೆ ರೈತರು ಬೇಸತ್ತು ಹೋಗಿದ್ದಾರೆ. ಇಂತಹ ಅವೈಜ್ಞಾನಿಕ ಹತ್ತಿ ಬೆಳೆಯುವ ಪದ್ಧತಿಗೆ ಸಂಬಂಧಿಸಿದ ಕೃಷಿ ಇಲಾಖೆ ಅಧಿಕಾರಿಗಳು ಮುಂದೆ ಬಂದು, ಬ್ರೇಕ್ ಹಾಕಬೇಕಾಗಿದೆ. ಅಂದಾಗ ಮಾತ್ರ ರೈತರ ಬೇವರು ಹನಿಗೆ ಅರ್ಥ ಬರುತ್ತದೆ. ಅಲ್ಲದೆ, ‘ಕೃಷಿತೋನಾಸ್ತಿ ದುರ್ಭಿಕ್ಷಃ’ ಎಂಬ ಸಾಲಿಗೆ ಬೆಲೆ ಬರುತ್ತದೆ..!!
(ಮುಂದುವರೆಯುವುದು…)
ನಾಳೆ..
– ಕೃಷಿ ಅಧಿಕಾರಿಗಳು ಏನಂತಾರೆ..!?

