ಕ್ಯಾದಿಗುಪ್ಪಾ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ‘ಶೇಖರಪ್ಪ ಉಪ್ಪಾರ’ ಆಯ್ಕೆ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಶೇಖರಪ್ಪ ಸಂಗಪ್ಪ ಉಪ್ಪಾರ ಆಯ್ಕೆಯಾಗಿದ್ದಾರೆ..!

ರಾಜಿನಾಮೆಯಿಂದ ತೆರವು ಆಗಿದ್ದ ಗ್ರಾಮ ಪಂಚಾಯತಿ ‘ಸಾಮಾನ್ಯ’ ಮೀಸಲಾತಿಗೆ ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶೇಖರಪ್ಪ ಸಂಗಪ್ಪ ಉಪ್ಪಾರ ಬಾಕಿ ಉಳಿದ 15 ತಿಂಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಜರುಗಿದ ಚುನಾವಣೆಯಲ್ಲಿ 13 ಜನ ಗ್ರಾಮ ಪಂಚಾಯತಿ ಸದಸ್ಯರು ಭಾಗವಹಿಸಿದ್ದರು. ಶೇಖರಪ್ಪ ಉಪ್ಪಾರ ಒಬ್ಬರೇ ಉಮೇದುವಾರಿಕೆ ಬಯಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ತಹಸೀಲ್ದಾರ ಎಂ.ಸಿದ್ಧೇಶ ಅವರು ಘೋಷಿಸಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಶೇಖರಪ್ಪ ಉಪ್ಪಾರ ಅವರನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಪಣ್ಣ ಗಂಗನಾಳ ಅವರು ಸನ್ಮಾನಿಸುವ ಮೂಲಕ ಸ್ವಾಗತಿಸಿದರು. ಡಿಇಓ ಜಾಫರ್ ಹುಸೇನ್ ಫಠಾನ್ ಸೇರಿದಂತೆ ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.