ಕ್ರಾಸ್ ಹತ್ತಿ ಬೀಜಕ್ಕೆ 34 ಸಾವಿರ ದರ ಫಿಕ್ಸ್..! ಇದು ಯಾವಾಗಲೂ ಬದಲಾಗಲ್ಲ..!!

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಒಂದು ಕ್ವಿಂಟಲ್ ಕ್ರಾಸ್ ಹತ್ತಿ ಬೀಜಕ್ಕೆ 34,000=00 ರೂಪಾಯಿಗಳು ದರ ಮಾತ್ರ ಫಿಕ್ಸ್. ದರದಲ್ಲಿ ಯಾವುದೇ ತರಹದ ಬದಲಾವಣೆಗೆ ಬೀಜ ಕಂಪನಿಗಳು ಇಲ್ಲಿಯವರೆಗೂ ಮುಂದಾಗಿಲ್ಲ. ಕಂಪನಿಗಳು ಬದಲಾವಣೆಗೆ ಮನಸ್ಸು ಕೂಡಾ ಮಾಡಿಲ್ಲ ಎಂಬುದು ಈ ದಿನದ ವಿಶೇಷ..!

ರೈತರ ಬೆಳೆಗಳಿಗೆ ಮಾತ್ರ ಖಾಯಂ ದರ ನಿಗದಿಪಡಿಸಿರುವ ಖಾಸಗಿ ಬೀಜ ಕಂಪನಿಗಳು, ತಾವು ವಿತರಿಸುವ ಬೀಜ, ಗೊಬ್ಬರ, ಕ್ರಿಮಿನಾಶಕ ದರದಲ್ಲಿ ಮಾತ್ರ ನಿತ್ಯ ಬದಲಾಗುತ್ತಿರುತ್ತದೆ. ಅಲ್ಲದೆ, ರೈತರು ನೀಡಬೇಕಾದ ಖರೀದಿಸಿದ ಬಾಕಿ ಹಣಕ್ಕೆ ನೂರಕ್ಕೆ 2 ರೂಪಾಯಿ ಬಡ್ಡಿ ಹಾಕಿ ವಸೂಲಿ ಮಾಡುವ ಪದ್ಧತಿ ಮಾತ್ರ ಎಂತವರನ್ನು ಕೆರಳಿಸುತ್ತಿದೆ. ಬೀಜ ಬೇರ್ಪಡಿಸಿದ ಬಳಿಕ ಸಿಗುವ ಕ್ವಿಂಟಲ್ ಹತ್ತಿಗೆ (ಅರಳಿ) 6 ರಿಂದ 9 ಸಾವಿರ ರೂಪಾಯಿಗಳವರೆಗೆ ಖರೀದಿ ಮಾಡುವ ಕಂಪನಿಗಳಿಗೆ ಯಾವುದೇ ತರಹದ ಖರೀದಿ ನಿಬಂಧನೆಗಳು ಇಲ್ಲವಾಗಿವೆ.


ರೈತರಿಗಾಗುವ ಘೋರ ಹಣದ ಅನ್ಯಾಯವನ್ನು ಸಂಬಂಧಿಸಿದ ಇಲಾಖೆ ಆರಂಭದಲ್ಲಿಯೇ ಮೂಗುದಾರ ಹಾಕಬೇಕಾಗಿದೆ. ಖಾಸಗಿ ಕಂಪನಿಗಳು ತಮ್ಮನ್ನು ಯಾರು ಪ್ರಶ್ನಿಸುವುದಿಲ್ಲ. ಯಾರ ಅಧೀನದಲ್ಲಿ ನಾವಿಲ್ಲ ಎಂಬ ಅಹಂಕಾರದ ನಡೆಗಳು ಮಾತ್ರ ರೈತರ ಜೀವನದ ಜೊತೆಗೆ ಆಟವಾಡುವಂತಿವೆ. ಖಾಸಗಿ ಕಂಪನಿಗಳ ಮೇಲೆ ಸಂಬಂಧಿಸಿದ ಇಲಾಖೆ ನಿಯಂತ್ರಣಕ್ಕೆ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರ ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುತ್ತದೆ..!?

(ಮುಂದುವರೆಯುವುದು…)

ನಾಳೆ..

– ಬೀಜ ಪಾಸಾಗಲಿಲ್ಲ ಅಂದ್ರೆ..!
ರೈತರಿಗೆ ನೈಯಾ ಪೈಸೆ ಇಲ್ಲ..!!