ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಪಟ್ಟಣದ ವಿಜಯ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಹಾಸ್ಪಿಟಲ್, ಆಯುಷಿ ಬಿರಾದಾರ ಗ್ರೂಫ್, 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗೂ ಹಿರಿಯ ವೈದ್ಯರಿಗೆ ಸನ್ಮಾನ ಸಮಾರಂಭವನ್ನು ದಿನಾಂಕ: 01-07-2022 ರಂದು ಬೆಳಗ್ಗೆ : 10-30ಕ್ಕೆ ಆಯೋಜಿಸಲಾಗಿದೆ..!
ಪಟ್ಟಣದ ಗಜೇಂದ್ರಗಡ ಮುಖ್ಯ ರಸ್ತೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿನ ನಿಲೋಗಲ್ ಕಾಂಪ್ಲೆಕ್ಸ್ ಅಲ್ಲಿ ಈ ಕಾರ್ಯಕ್ರಮವನ್ನು ಡಾ. ವಿಜಯಕುಮಾರ ಬಿರಾದರ ಅವರು ಆಯೋಜಿಸಿದ್ದು, ಸಂಸದ ಸಂಗಣ್ಣ ಕರಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅಧ್ಯಕ್ಷತೆ ವಹಿಸುವರು. ಮುಖ್ಯ ಅಥಿತಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ದೊಡ್ಡನಗೌಡ ಎಚ್. ಪಾಟೀಲ, ಮಾಜಿ ಶಾಸಕರಾದ ಕೆ. ಶರಣಪ್ಪ ವಕೀಲರು, ಹಸನಸಾಬ ದೋಟಿಹಾಳ, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಕೆ. ಹಿರೇಮಠ, ರಾಷ್ಟ್ರೀಯ ಹಣ್ಣು ಬೆಳೆಗಾರರ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಪಿ.ಎಲ್.ಡಿ.ಐ.ಬ್ಯಾಂಕ್ ಮಾಜಿ ಅಧ್ಯಕ್ಷ ಪ್ರಭುಶಂಕರಗೌಡ ಪಾಟೀಲ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ನಿರ್ದೇಶಕ ಡಾ.ರವಿಕುಮಾರ ದಾನಿ, ನೇತ್ರ ತಜ್ಞ ಡಾ. ಸುಶೀಲಕುಮಾರ ಕಾಖಂಡಕಿ, ಇಲಕಲ್ಲನ ಖ್ಯಾತ ದಂತ ವೈದ್ಯ ಡಾ. ರೂಪೇಶ ನಗರಿ, ಕುಷ್ಟಗಿ ಕಸಾಪ ತಾಲೂಕಾಧ್ಯಕ್ಷ ವಿರೇಶ ಬಂಗಾರಶೆಟ್ಟರ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಶಾರದಾ ಶೆಟ್ಟರ, ಹಿರಿಯ ಪತ್ರಕರ್ತ ಮುಖೇಶ ನಿಲೋಗಲ್ಲ, ಶರಣಬಸವೇಶ್ವರ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ, ಶ್ರೀ ಸಾಯಿ ಶಂಕರ ಬಿ.ಎಸ್.ಎಸ್.ಎನ್. ಅಧ್ಯಕ್ಷ ಮಲ್ಲಿಕಾರ್ಜುನ ಬಳಿಗಾರ, ತಾಲೂಕ ವೀರಶೈವ ಅಂಗಾಯತ ಸೇವಾ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಮಸೂತಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದೂಪಯೋಗ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮ ಆಯೋಜಕರಾದ ಡಾ.ವಿಜಯಕುಮಾರ್ ಬಿರಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!