ಶ್ರೀ ಮರಿಶಾಂತವೀರ ಮಹಾಸ್ವಾಮಿಗಳನ್ನು ನೆನೆದ : ವಿ.ಎಸ್.ಕಾಡಗಿಮಠ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕೊಪ್ಪಳ ಗವಿಮಠದ ಈ ಹಿಂದಿನ ಪೀಠಾಧಿಪತಿಗಳಾದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ಹಾಗೂ ಪ್ರಸಾದ ನಿಲಯಗಳನ್ನು ತೆರೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾದರು ಎಂದು ವಯೋನಿವೃತ್ತಿಗೊಂಡಿರುವ ವೀರಬಸಯ್ಯ ಸಂಗಯ್ಯ ಕಾಡಗಿಮಠ ಮನದಾಳದ ಮಾತುಗಳ ಮೂಲಕ ತಮ್ಮ ಆರಂಭದ ವೃತ್ತಿ ಬದುಕನ್ನು ಮೆಲುಕು ಹಾಕಿ ನೆನೆದ ಪ್ರಸಂಗ ಜರಗಿತು..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರು ಶ್ರೀ ಗವಿಸಿದ್ಧೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ವಿ.ಎಸ್.ಕಾಡಗಿಮಠ ಮತ್ತು ದ್ವಿತೀಯ ದರ್ಜೆ ಸಹಾಯಕ ವೀರನಗೌಡ ಆರ್ ಪಾಟೀಲ್ ಅವರು ವಯೋನಿವೃತ್ತಿ ಹೊಂದಿರುವ ಕಾರಣಕ್ಕಾಗಿ ಸಂಸ್ಥೆಯವರು ಹಮ್ಮಿಕೊಂಡಿದ್ದ ಬಿಳ್ಕೋಡಿಗೆ ಸಮಾರಂಭದಲ್ಲಿ ನೂರಾರು ಜನರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು. ಅತ್ಯಂತ ಹಿಂದುಳಿದ ಹಿರೇಮನ್ನಾಪೂರು ಗ್ರಾಮದಲ್ಲಿ 1982 ರಲ್ಲಿ ಖಾಸಗಿ ಶಾಲೆ ತೆರೆದಿದ್ದು ಕೊಪ್ಪಳ ಗವಿಮಠದ ಶ್ರೀಗಳ ಸಾಧನೆ ಮಹತ್ತರವಾಗಿರುವಂತದ್ದು , ಸಾವಿರಾರು ಕುಟುಂಬಗಳಿಗೆ ಆಶ್ರಯ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಆಗಿನ ಶ್ರೀಗಳ ಕಾಯಕ, ಪ್ರಸಾದ ಸೇವೆ, ಶಿಕ್ಷಣ ಹಾಗೂ ಧರ್ಮ ಇತ್ಯಾದಿ ಕಾರ್ಯಗಳನ್ನು ಸ್ಮರಿಸಿ ಭಾವನಾತ್ಮಕವಾದ ಅನಿಸಿಕೆಗಳನ್ನು ವಿ.ಎಸ್.ಕಾಡಗಿಮಠ ಅಭಿಪ್ರಾಯವ್ಯಕ್ತಪಡಿಸಿದರು.

ಕೂಡಲಸಂಗಮ ಕ್ರಾಸ್ ಬಳಿಯ ಮಠದ ಶ್ರೀ ಅವಧೂತ ಶರಣರು ದಿವ್ಯಸಾನಿಧ್ಯವಹಿಸಿದ್ದರು. ಬಿಇಓ ಸುರೇಂದ್ರ ಕಾಂಬಳೆ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಹಿರೇಮಠ, ಗವಿಸಿದ್ಧಯ್ಯ ಕಾಡಗಿಮಠ, ದೇವಪ್ಪ ಗಂಗನಾಳ, ಬಸವರಾಜ ಮೆಳ್ಳಿ, ದೈಹಿಕ ಶಿಕ್ಷಣ ಪರಿವೀಕ್ಷಕ ಧರ್ಮಕುಮಾರ ಕಂಬಳಿ, ಮುಖ್ಯಗುರು ಎಸ್.ಜಿ.ಕಡೇಮನಿ, ಪ್ರೌಢ ಶಾಲಾ ನೌಕರರ ಪತ್ತಿನ ಸಂಘದ ಅಧ್ಯಕ್ಷ ನಾಗರಾಜ ನಿಡಗುಂದಿ, ದೈಹಿಕ ಶಿಕ್ಷಣ ಶಿಕ್ಷಕರಾದ ವಿಜಯಕುಮಾರ ಬ್ಯಾಲಿಹಾಳ, ಜಗದೀಶ ಸೂಡಿ, ಸೈಯ್ಯದ ನದಾಫ್, ನಿಂಗಪ್ಪ ಕಂಠಿ, ಎಸ್.ವಾಯ್.ಕಂಚಿ, ಆರ್.ಕೆ.ಸುಭೇದಾರ, ಶಿವಾನಂದ ಹಿರೇಮಠ, ಚಿದಾನಂದ ಗಂಗನಾಳ, ಸವಿತಾ ಹಿರೇಮಠ, ತಬ್ಸುಮ್ ಫಾತೀಮಾ, ಗುರುಬಸಯ್ಯ ಹಿರೇಮಠ, ಸಂತೋಷ ಗಂಜಿಹಾಳ, ಪ್ರಲ್ಹಾದ ದಾಸರ, ಗೋಪಾಲ ಕುಷ್ಟಗಿ ಸೇರಿದಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳು, ಅಭಿಮಾನಿ ಬಳಗ, ನಿವೃತ್ತಿ ಹೊಂದಿದ ಕುಟುಂಬ ವರ್ಗ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ನಿವೃತ್ತಿ ಹೊಂದಿದ ವಿ.ಎಸ್.ಕಾಡಗಿಮಠ ಹಾಗೂ ವೀರನಗೌಡ ಆರ್ ಪಾಟೀಲ್ ಇವರನ್ನು ಗ್ರಾಮದಲ್ಲಿ ವೈಭವ ಮೂಲಕ ಮೆರವಣಿಗೆ ಕೈಗೊಂಡಿದ್ದು ಶಿಕ್ಷಕರಿಗೆ ನೀಡಿದ ಗೌರವ ಇತಿಹಾಸ ಪುಟ ಸೇರಿದಂತಾಗಿತು..!!