ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಓಟದ ರಾಣಿ ಪಿ.ಟಿ ಉಷಾ ಸೇರಿದಂತೆ ನಾಲ್ವರು ರಾಜ್ಯಸಭೆಗೆ ಆಯ್ಕೆ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ 

ಕೊಪ್ಪಳ : ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆ, ಭಾರತದ ಓಟದ ರಾಣಿಯಂತಲೇ ಖ್ಯಾತಿ ಗಳಿಸಿದ ಅಥ್ಲೆಟಿಕ್ಸ್ ಪಿ.ಟಿ.ಉಷಾ, ಖ್ಯಾತಿ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಪ್ರಸಿದ್ಧ ಸಿನಿಮಾ ನಿರ್ದೇಶಕ ಇ.ವಿಜಯೇಂದ್ರ ಪ್ರಸಾದ ಈ ನಾಲ್ವರು ರಾಜ್ಯಸಭೆಗೆ ಆಯ್ಕೆಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಅಭಿನಂದಿಸಿದ್ದಾರೆ..!

ದೇಶದ ಮೇಲ್ಮನೆ ಹಾಗೂ ಬುದ್ದಿವಂತರ ಚಾವಡಿ ರಾಜ್ಯಸಭೆಗೆ ಕಲೆ, ಸಾಹಿತ್ಯ, ಕ್ರೀಡೆ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಿಂದ ಆಯ್ಕೆಯಾಗದೆ ಖಾಲಿ ಇರುವ ಸ್ಥಾನಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದೇಶದ ಮಹಾನ್ ನಾಲ್ವರನ್ನು ಎನ್.ಡಿ.ಎ ಸರಕಾರ ನಾಮನಿರ್ದೇಶನ ಮಾಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಪ್ರಧಾನಿ ಮೋದಿಯವರು ವಿಶೇಷವಾಗಿ ಕ್ರೀಡಾ ಕ್ಷೇತ್ರಕ್ಕೆ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ಪಿ.ಟಿ.ಉಷಾ ಅವರ ಆಯ್ಕೆ ಕುರಿತು ಟ್ವಿಟರ್ ನಲ್ಲಿ ಹೆಮ್ಮೆ ವ್ಯಕ್ತಪಡಿಸಿದ್ದು ವಿಶೇಷ..!!