ಹತ್ತಿ ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡಲಾಗುವುದು : ಹನುಮಗೌಡ ಬೆಳಗುರ್ಕಿ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕ್ರಾಸ್ ಹತ್ತಿ ಬೀಜಗಳಿಂದ ಬಾಧೆಗೊಳಗಾಗುತ್ತಿರುವ ಹತ್ತಿ ಬೆಳೆಗಾರರ ರಕ್ಷಣೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಉಪ ನಿರ್ದೇಶಕರುಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ರೈತರ ಹಿತಕಾಪಾಡಬೇಕೆಂದು ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಅವರು ‘ಕೃಷಿ ಪ್ರಿಯ’ ಪತ್ರಿಕೆಗೆ ಹೇಳಿಕೆ ನೀಡುವ ಮೂಲಕ ಖಾಸಗಿ ಬೀಜ ಕಂಪನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ..!

ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ದೂರವಾಣಿ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿದಿಷ್ಟು , ಇಡೀ ದೇಶಕ್ಕೆ ಉತ್ತಮ ಬೀಜಗಳನ್ನು ನೀಡುವ ಶ್ರೇಯಸ್ಸು ಪ್ರಮುಖವಾಗಿ ಕೊಪ್ಪಳ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ ರೈತರಿಗೆ ಸಲ್ಲುತ್ತದೆ. ಆದರೆ, ವಿಶೇಷವಾಗಿ ಹತ್ತಿ ಬೀಜ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಆಗಿರುವ ಅನ್ಯಾಯ ಅಕ್ಷಮ್ಯ ಅಪರಾಧ. ಹತ್ತಿ ಬೀಜ ಬೆಲೆ ನಿಗದಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಬೀಜ ನಿಗಮದ ಹಿರಿಯ ಅಧಿಕಾರಿಗಳ ಜೊತೆಗೆ ಸಂಪರ್ಕಿಸಿ, ಬೆಲೆ ಮಾಹಿತಿ ಕಲೆ ಹಾಕಿ ಅನ್ಯಾಯಕ್ಕೊಳಗಾದ ರೈತರ ಹಿತಕಾಪಾಡುವುದು ಧರ್ಮವಾಗಿದೆ. ಬೀಜ ಉತ್ಪಾದನಾ ‘ಹಬ್’ ಆಗಿರುವ ಕೊಪ್ಪಳ, ಹಾವೇರಿ, ಗದಗ ಹಾಗೂ ದಾವಣಗೇರಿ ಜಿಲ್ಲೆಗಳ ನಡುವೆ ಅಂದರೇ, ಕೊಪ್ಪಳ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಕೂಡಲೇ ಕೃಷಿ ಅಧಿಕಾರಿಗಳ ಸಭೆ ಕರೆದು, ಚರ್ಚಿಸಿದ ಬಳಿಕ ಖಾಸಗಿ ಕಂಪನಿಗಳ ಮೇಲೆ ನಿರ್ಣಯ ಕೈಗೊಳ್ಳಲಾಗುವುದು ಎಂದರು..!!

(ಮುಂದುವರೆಯುವುದು…)

ನಾಳೆ…

– ರಾಜ್ಯ ಬೀಜ ಉತ್ಪಾದನಾ ನಿಗಮದ ಡೆಪ್ಯುಟಿ ಡೈರೆಕ್ಟರ್ ನಯೀಮ್ ಪಾಷಾ ಏನು ಹೇಳುತ್ತಾರೆ..!?