ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ರೈತರೊಂದಿಗೆ ಯಾವುದೇ ತರಹದ ಒಪ್ಪಂದ ಪತ್ರಗಳಿಲ್ಲದೇ, ಅನ್ ಕ್ರಾಸ್ ಹತ್ತಿ ಬೀಜಗಳನ್ನು ವಿತರಿಸುವ ಮೂಲಕ ಖಾಸಗಿ ಕಂಪನಿಗಳು ದರ ನಿಗದಿಯಲ್ಲಿ ಇಲ್ಲಿಯವರೆಗೂ ಮೊಸಗೊಳಿಸುತ್ತಾ ಬಂದಿವೆ..!?
ಹತ್ತಿ ಬೀಜಗಳನ್ನು ವಿತರಿಸುವ ಖಾಸಗಿ ಬೀಜ ಕಂಪನಿಗಳಾಗಲಿ ಅಥವಾ ಮಧ್ಯವರ್ತಿಗಳಿಂದಾಗಲಿ ರೈತರೊಂದಿಗೆ ಹತ್ತಿ ಬೆಳೆಯುವುದರ ಕುರಿತು ಯಾವುದೇ ತರಹದ ಒಪ್ಪಂದ ಪತ್ರಗಳ ಪ್ರಕ್ರಿಯೆಗಳು ಇಲ್ಲಿಯವರೆಗೂ ನಡೆದಿಲ್ಲ.
ಖಾಸಗಿ ಕಂಪನಿಯವರು ರೈತರಿಗೆ ಬೀಜ ವಿತರಿಸಬೇಕಾದರೇ ಯಾವುದೇ ತರಹದ ಷರತ್ತುಗಳ ಅನ್ವಯ ಸೇರಿದಂತೆ ಯಾವ ತರಹದ ಒಪ್ಪಂದದ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ರೈತರಿಗೆ ಇಲ್ಲವಾಗಿದೆ.
ಹತ್ತಿ ಬೀಜಗಳನ್ನು ಕಂಪನಿ ಖರೀದಿ ಮಾಡುವಾಗ ಕ್ವಿಂಟಲ್ ಗೆ ದರ ಹೇಗೆ..? ನಿಗದಿಪಡಿಸಲಾಗುತ್ತದೆ. ದರ ನಿಗದಿಪಡಿಸುವಾಗ ಯಾವ ಯಾವ ಇಲಾಖೆಗಳ ಜವಾಬ್ದಾರಿ ಏನು ಎಂಬ ಇತ್ಯಾದಿಗಳು ಮಾನದಂಡಗಳು ಕೂಡಾ ಬಹಿರಂಗವಿಲ್ಲ. ಮಧ್ಯವರ್ತಿಗಳು ನಿಗದಿಪಡಿಸಿದ್ದೇ ದರ ಪೈನಲ್. ಇಲ್ಲಿ ಯಾವುದೇ ತರಹದ ಪಾರದರ್ಶಕ ಮಾತ್ರ ಕಾಣುತ್ತಿಲ್ಲ. ಹತ್ತಿ ಬೀಜ ನೀಡುವ ಖಾಸಗಿ ಕಂಪನಿಗಳು ಮತ್ತು ರೈತರ ನಡುವೆ ನಮ್ಮದು ಯಾವುದೇ ರೀತಿಯ ಸಂಬಂಧಗಳಿರುವುದಿಲ್ಲ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ನಡೆ ಮಾತ್ರ ವಿಚಿತ್ರವಾಗಿದೆ.
ಕೃಷಿ ಇಲಾಖೆ ಮೌನಕ್ಕೆ ರೈತರು ದರದಲ್ಲಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿಗಳ ಹಾನಿ ಅನುಭವಿಸಬೇಕಾದ ಪರಿಸ್ಥಿತಿ ಸುಮಾರು ವರ್ಷಗಳಿಂದ ನಡೆದು ಬಂದಿದೆ.
ಕ್ರಾಸ್ ಹತ್ತಿ ಪ್ರಕರಣದಲ್ಲಿ ಖಾಸಗಿ ಕಂಪನಿಗಳು ನಡೆದಿದ್ದೇ ದಾರಿ, ತಾವು ಮಾಡಿದ್ದೇ ಕಾನೂನು, ತಾವು ನಿರ್ಧರಿಸಿದ್ದು ಮಾತ್ರ ನಿಯಮ, ಷರತ್ತು ಹಾಗೂ ಒಪ್ಪಂದಗಳಾಗಿವೆ.
ಒಂದು ಬಿಳಿ ಹಾಳೆ ಮೇಲೆ ರೈತರೊಂದಿಗೆ ಖಾಸಗಿ ಬೀಜ ಕಂಪನಿಗಳ ನಡುವೆ ಒಪ್ಪಂದ ಪತ್ರಗಳು ಇಲ್ಲದ್ದು ಗಮನಿಸಿದ್ದಾದರೇ.. ಹತ್ತಿ ಬೀಜಗಳನ್ನ ವಿತರಿಸುವ ಬೀಜ ಕಂಪನಿಗಳ ಅವ್ಯವಹಾರಕ್ಕೆ ಇನ್ನೇಂತಾ ಸಾಕ್ಷಿಗಳು ಬೇಕು..!?
(ಮುಂದುವರೆಯುವುದು… )
ನಾಳೆ…
– ಹನುಮಗೌಡ ಬೆಳಗುರ್ಕಿ,
ಅಧ್ಯಕ್ಷರು, ರಾಜ್ಯ ಕೃಷಿ ಬೆಲೆ ಆಯೋಗ ಇವರಿಂದ ಪ್ರತಿಕ್ರಿಯೆ..!